8 ವಾಣಿಜ್ಯ ಮಳಿಗೆಗಳ ಹರಾಜು: ಮಾಸಿಕ ₹ 3,97,600 ಬಾಡಿಗೆ ನಿಗದಿ

7

8 ವಾಣಿಜ್ಯ ಮಳಿಗೆಗಳ ಹರಾಜು: ಮಾಸಿಕ ₹ 3,97,600 ಬಾಡಿಗೆ ನಿಗದಿ

Published:
Updated:

ಚನ್ನರಾಯಪಟ್ಟಣ: ಪುರಸಭಾ ವ್ಯಾಪ್ತಿಯಲ್ಲಿನ 8 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು. ಮಾಸಿಕ ₹ 3,97,600 ಬಾಡಿಗೆ ನಿಗದಿಯಾಯಿತು. ಮಾರುಕಟ್ಟೆ ಎಡಭಾಗದ ಮಳಿಗೆ ಸಂಖ್ಯೆ 131 ಅತಿ ಹೆಚ್ಚಿನ ಬಾಡಿಗೆ ಮೊತ್ತ ₹ 91,100ಕ್ಕೆ ಹರಾಜು ಆಯಿತು.

ಮಳಿಗೆ ಸಂಖ್ಯೆ 130 (₹ 78,500), ಮಳಿಗೆ ಸಂಖ್ಯೆ 152 (₹ 70 ಸಾವಿರ), 155 (₹ 40,500), 170 (₹ 40 ಸಾವಿರ), 43 (₹ 35 ಸಾವಿರ), 41 (₹ 33,500) ಹಾಗೂ ಮಳಿಗೆ ಸಂಖ್ಯೆ 173ಕ್ಕೆ (₹ 9 ಸಾವಿರ) ಬಾಡಿಗೆ ನಿಗದಿಯಾಯಿತು. 8 ಮಳಿಗೆಗಳಿಗೆ ಸರ್ಕಾರ ಮಾಸಿಕ ₹ 43,790 ಬಾಡಿಗೆ ನಿಗದಿಪಡಿಸಿತ್ತು. ಆದರೆ, ಹರಾಜು ಪ್ರಕ್ರಿಯೆಯಿಂದ ಶೇ 90 ರಷ್ಟು

ಹೆಚ್ಚು ಪ್ರಮಾಣದಲ್ಲಿ ಬಾಡಿಗೆ ನಿಗದಿಯಾಗಿದೆ. ಮಂಗಳವಾರ 9 ಮಳಿಗೆಗಳನ್ನು ಹರಾಜು ಮಾಡಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಒಂದು ಮಳಿಗೆಯನ್ನು ಹರಾಜು ಹಾಕಲಾಗಲಿಲ್ಲ. ಒಟ್ಟು 600 ಬಿಡ್ಡುದಾರರು ಡಿ.ಡಿ. ಸಲ್ಲಿಸಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿ ದ್ದರು ಎಂದು ಮುಖ್ಯಾಧಿಕಾರಿ ಸಿ.ಎಸ್‌. ಬಸವರಾಜು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry