ಲ್ಯಾಪ್‍ಟಾಪ್‍‍ನಿಂದ ಮೊಬೈಲ್‍ಗೆ ಫೈಲ್‍‍ಗಳ ರವಾನೆ

7

ಲ್ಯಾಪ್‍ಟಾಪ್‍‍ನಿಂದ ಮೊಬೈಲ್‍ಗೆ ಫೈಲ್‍‍ಗಳ ರವಾನೆ

Published:
Updated:

ಮೊಬೈಲ್‍‍ನಿಂದ ಲ್ಯಾಪ್‍‍ಟಾಪ್‍‍ಗೆ ಅಥವಾ ಲ್ಯಾಪ್‍‍ಟಾಪ್‍‍ನಿಂದ ಮೊಬೈಲ್‍‍ಗೆ ಫೈಲ್‍‍ಗಳನ್ನು ರವಾನಿಸಲು ಡೇಟಾ ಕೇಬಲ್‍‍ ಬಳಸುವುದು ಸಾಮಾನ್ಯ. ಆದರೆ, ಡೇಟಾ ಕೇಬಲ್‍‍ ಇಲ್ಲದ ಸಂದರ್ಭದಲ್ಲಿ ಫೈಲ್‍‍ಗಳನ್ನು ವರ್ಗಾಯಿಸುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ಡೇಟಾ ಕೇಬಲ್‍‍ ಇಲ್ಲದ ವೇಳೆ ಲ್ಯಾಪ್‍‍ಟಾಪ್‍‍ನಿಂದ ಫೈಲ್‍‍ಗಳನ್ನು ವರ್ಗಾಯಿಸಲು ಇರುವ ಸರಳ ಮಾರ್ಗ ಬ್ಲೂಟೂತ್. ಮೊದಲು ನಿಮ್ಮ ಲ್ಯಾಪ್‍‍ಟಾಪ್‍‍ ಮತ್ತು ಮೊಬೈಲ್‍ನಲ್ಲಿ ಬ್ಲೂಟೂತ್ ಆನ್ ಮಾಡಿ. ಡಿವೈಸ್‍‍ ಪೇರ್ ಆದ ಬಳಿಕ ನೀವು ಯಾವ ಫೈಲ್‍‍ ಅನ್ನು ಲ್ಯಾಪ್‍‍ಟಾಪ್‍‍ನಿಂದ ಮೊಬೈಲ್‍ಗೆ ವರ್ಗಾಯಿಸಬೇಕೆಂದಿದ್ದೀರೋ ಆ ಫೈಲ್‍‍ ಅನ್ನು ಆಯ್ಕೆ ಮಾಡಿಕೊಂಡು ರೈಟ್‍‍ ಕ್ಲಿಕ್ ಮಾಡಿ.

ಈಗ ಕಾಣುವ ಆಯ್ಕೆಗಳಲ್ಲಿ send to ಮೇಲೆ ಕ್ಲಿಕ್ಕಿಸಿ. ಇಲ್ಲಿನ ಆಯ್ಕೆಗಳಲ್ಲಿ Bluetooth File Transfer ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್‍‍ ಆಯ್ಕೆ ಮಾಡಿಕೊಂಡು Next ಮೇಲೆ ಕ್ಲಿಕ್ಕಿಸಿ. ನಿಮ್ಮ ಮೊಬೈಲ್‍‍ನಲ್ಲಿ ಫೈಲ್‍‍ ಸ್ವೀಕೃತಿಯ ಅನುಮತಿ ಕೇಳುತ್ತದೆ. ನೀವು ಅದನ್ನು ಅನುಮೋದಿಸಿದರೆ ಲ್ಯಾಪ್‍‍ಟಾಪ್‍‍ನಿಂದ ಬ್ಲೂಟೂತ್‍‍ ಮೂಲಕ ಬಂದ ಫೈಲ್‍‍ ನಿಮ್ಮ ಮೊಬೈಲ್‍‍ನಲ್ಲಿ ಸೇವ್‍‍ ಆಗುತ್ತದೆ.

ಟೆಕ್ಸ್ಟ್ ಫೈಲ್‍, ಚಿತ್ರಗಳು ಸೇರಿದಂತೆ ಸಣ್ಣ ಸಣ್ಣ ಫೈಲ್‍ಗಳನ್ನು ಹೀಗೆ ಬ್ಲೂಟೂತ್ ಮೂಲಕ ವರ್ಗಾಯಿಸಿಕೊಳ್ಳಬಹುದು. ದೊಡ್ಡ ಗಾತ್ರದ ಫೈಲ್‍‍ಗಳನ್ನು ಬ್ಲೂಟೂತ್‍‍ ಮೂಲಕ ಕಳಿಸಲು ಮುಂದಾದರೆ ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ದೊಡ್ಡ ಗಾತ್ರದ ಫೈಲ್‍‍ ಕೆಲವೊಮ್ಮೆ ರವಾನೆಯಾಗದೆಯೂ ಇರಬಹುದು. ಡೇಟಾ ಕೇಬಲ್ ಇಲ್ಲದ ಸಂದರ್ಭದಲ್ಲಿ, ಡೇಟಾ ಸಂಪರ್ಕ ಸಾಧ್ಯವಾಗದಿದ್ದಾಗ, ಹಾಟ್‍‍ಸ್ಪಾಟ್‍‍ ಸಂಪರ್ಕ ಕೈಕೊಟ್ಟಾಗ ಹೀಗೆ ಬ್ಲೂಟೂತ್‍ ಮೂಲಕ ಫೈಲ್‍‍ಗಳನ್ನು ವರ್ಗಾಯಿಸಿಕೊಳ್ಳಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry