ವಾಟ್ಸ್‌ಆ್ಯಪ್‌ನಲ್ಲಿ ಮುಖ್ಯಮಂತ್ರಿಯನ್ನು ಅವಮಾನಿಸುವ ಸಂದೇಶ

7

ವಾಟ್ಸ್‌ಆ್ಯಪ್‌ನಲ್ಲಿ ಮುಖ್ಯಮಂತ್ರಿಯನ್ನು ಅವಮಾನಿಸುವ ಸಂದೇಶ

Published:
Updated:
ವಾಟ್ಸ್‌ಆ್ಯಪ್‌ನಲ್ಲಿ ಮುಖ್ಯಮಂತ್ರಿಯನ್ನು ಅವಮಾನಿಸುವ ಸಂದೇಶ

ಹುಬ್ಬಳ್ಳಿ: ಇಲ್ಲಿನ ಪಾಲಿಕೆಯ ಕಾಂಗ್ರೆಸ್‌ ಸದಸ್ಯರೊಬ್ಬರು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಮಾನಿಸುವಂತಹ ಜಿಫ್‌ (GIF) ಅನ್ನು ಹಾಕಿ ವಿರೋಧಕ್ಕೆ ಗುರಿಯಾಗಿದ್ದಾರೆ.

‘ಹುಬ್ಬಳ್ಳಿ–ಧಾರವಾಡ ಮಹಿಳಾ ಕಾಂಗ್ರೆಸ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪಾಲಿಕೆ ಸದಸ್ಯ ಮೋಹನ್ ಹಿರೇಮನಿ ಎಂಬುವರು ಜಿಫ್ ಹಾಕಿದ್ದಾರೆ. ಮುಖ್ಯಮಂತ್ರಿಗಳ ಮುಖವನ್ನೊಳಗೊಂಡ ಜಿಫ್‌ ಅನ್ನು ತೆರೆಯುತ್ತಿದ್ದಂತೆ ಅದು ಗೊರಿಲ್ಲಾವಾಗಿ ಮಾರ್ಪಡುತ್ತದೆ.

ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಗ್ರೂಪ್‌ನ ಅಡ್ಮಿನ್ ಸುನಿತಾ ಅವರು ಮೋಹನ್ ಹಿರೇಮನಿ ಅವರನ್ನು ರಿಮೂವ್ ಮಾಡಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರೂ ಗ್ರೂಪ್‌ನ ಸದಸ್ಯರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry