ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ನಲ್ಲಿ ಶೇ 100, ಏರ್‌ ಇಂಡಿಯಾದಲ್ಲಿ ಶೇ 49 ಎಫ್‌ಡಿಐಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

7

ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ನಲ್ಲಿ ಶೇ 100, ಏರ್‌ ಇಂಡಿಯಾದಲ್ಲಿ ಶೇ 49 ಎಫ್‌ಡಿಐಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

Published:
Updated:
ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ನಲ್ಲಿ ಶೇ 100, ಏರ್‌ ಇಂಡಿಯಾದಲ್ಲಿ ಶೇ 49 ಎಫ್‌ಡಿಐಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

ನವದೆಹಲಿ: ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ನಲ್ಲಿ ಶೇ 100 ಹಾಗೂ ಏರ್‌ ಇಂಡಿಯಾದಲ್ಲಿ ಶೇ 49 ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ.

ವಿದೇಶಿ ವಿಮಾನಯಾನ ಸಂಸ್ಥೆಗಳು ಸರ್ಕಾರದ ಅನುಮೋದನೆ ಮೂಲಕ ‘ಏರ್‌ ಇಂಡಿಯಾ’ದಲ್ಲಿ ಶೇ 49ರಷ್ಟು ಹೂಡಿಕೆಗೆ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಏರ್‌ ಇಂಡಿಯಾದ ಸಮರ್ಥ ನಿರ್ವಹಣೆ ಹಾಗೂ ಮಾಲೀಕತ್ವ ಭಾರತೀಯರಲ್ಲಿಯೇ ಉಳಿಯಬೇಕು ಎಂಬ ಉದ್ದೇಶದೊಂದಿಗೆ ಗರಿಷ್ಠ ಶೇ 49ರಷ್ಟು ನೇರ ಅಥವಾ ಪರೋಕ್ಷ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಸಿಂಗಲ್‌ ಬ್ರ್ಯಾಂಡ್ ರಿಟೇಲ್‌ ಕ್ಷೇತ್ರದಲ್ಲಿ ಸರ್ಕಾರದ ಅನುಮತಿ ಇಲ್ಲದೇ ಶೇ 100ರಷ್ಟು  ಎಫ್‌ಡಿಐಗೆ ಅವಕಾಶ ನೀಡಲು ಅನುಮೋದನೆ ದೊರೆತಿದೆ.

ಮಾರಾಟ ಮಾಡುವ ಉತ್ಪನ್ನ ‘ಸಿಂಗಲ್‌ ಬ್ರ್ಯಾಂಡ್‌’ ಆಗಿರಬೇಕು. ಜಾಗತಿಕ ಮಟ್ಟದಲ್ಲಿ ಆ ಉತ್ಪನ್ನವನ್ನು ಅದೇ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಬೇಕು ಎಂಬ ಷರತ್ತಿನ ಅಡಿಯಲ್ಲಿ ಸರ್ಕಾರ ವಿದೇಶಿ ಹೂಡಿಕೆದಾರರಿಗೆ ಒಪ್ಪಿಗೆ ನೀಡುತ್ತದೆ.  ‌

ರಿಯಲ್‌ ಎಸ್ಟೇಟ್‌ ಸೇವೆಗಳಲ್ಲಿಯೂ ಎಫ್‌ಡಿಐ ನಿಯಮಾವಳಿಗೆ ಸಡಿಲಿಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

5 ವರ್ಷ ಅವಕಾಶ ಕೇಳಿದ್ದ ಏರ್‌ ಇಂಡಿಯಾ:

ಏರ್ ಇಂಡಿಯಾ ಗಳಿಸುವ ಆದಾಯದಲ್ಲಿ ಶೇ 60ರಷ್ಟು ವಿದೇಶಿ ಕರೆನ್ಸಿಯಲ್ಲಿ ದೊರೆಯುತ್ತಿದ್ದು, ಖಾಸಗೀಕರಣದಿಂದ ಈ ಹಣವು ವಿದೇಶಿ ವಿಮಾನಯಾನ ಸಂಸ್ಥೆಗಳ ಪಾಲಾಗಲಿದೆ ಎಂದು ಸರ್ಕಾರಕ್ಕೆ ತಿಳಿಸಲಾಗಿತ್ತು. ಇದರಿಂದ 3.34 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವ ಸಂಭವವಿದೆ ಎಂದು ಏರ್‌ ಇಂಡಿಯಾ ಆತಂಕ ವ್ಯಕ್ತಪಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry