ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಕರಗಿ ಕುರ್ಚಿಯಾಯ್ತು

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ಪ್ಲಾಸ್ಟಿಕ್ ಸಮಸ್ಯೆ ಬೆಟ್ಟದಷ್ಟಾಗಿದೆ. ಅದನ್ನು ಮರುಬಳಕೆ ಮಾಡಬಲ್ಲ ಹಾದಿಗಳು ಹುಟ್ಟಿಕೊಂಡಿದ್ದರೂ ಬಳಕೆಗೆ ಕಡಿವಾಣ ಹಾಕದಿರುವುದು ಪರಿಹಾರಕ್ಕೆ ದೊಡ್ಡ ಅಡ್ಡಿ. ಆದರೂ ಈ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನ ನಡೆದಿದೆ. ಅದು ‘ಪ್ರಿಂಟ್ ಯುವರ್ ಸಿಟಿ’ ಅಭಿಯಾನದ ಮೂಲಕ.

ನೆದರ್‌ಲೆಂಡಿನ ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ಪ್ಲಾಸ್ಟಿಕ್‌ ಅನ್ನು ನಗರದ ಸೌಂದರ್ಯ ಇಮ್ಮಡಿಗೊಳಿಸಲು ಬಳಸಲಾಗುತ್ತಿದೆ. 3ಡಿ ತಂತ್ರಜ್ಞಾನವನ್ನು ಬಳಸಿ, ಪ್ಲಾಸ್ಟಿಕ್ ತ್ಯಾಜ್ಯದಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಕ್ಕೆ ಬರುವಂಥ ಸುಂದರ ಕುರ್ಚಿಗಳನ್ನು ರೂಪಿಸಲಾಗುತ್ತಿದೆ. ಇದರ ರೂವಾರಿ ನ್ಯೂ ರಾ ಸ್ಟುಡಿಯೊ.

ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ವರ್ಷಕ್ಕೆ ವ್ಯಕ್ತಿಯೊಬ್ಬ 23ಕೆ.ಜಿ ಪ್ಲಾಸ್ಟಿಕ್ ಬಳಕೆ ಮಾಡುತ್ತಾನೆ ಎಂಬ ಅಂಕಿ ಅಂಶವೇ ಈ ಪ್ರಯತ್ನಕ್ಕೆ ಪ್ರೇರೇಪಿಸಿದ್ದು. ಈಗಾಗಲೇ ಮೊದಲ ಮಾದರಿ ಸಿದ್ಧಗೊಂಡಿದ್ದು, ‘ಎಕ್ಸ್‌ಎಕ್ಸ್‌ಎಕ್ಸ್‌ ಬೆಂಚ್’ ಎಂದು ಹೆಸರಿಡಲಾಗಿದೆ. ಇಬ್ಬರಿಂದ ನಾಲ್ಕು ಮಂದಿಯವರೆಗೂ ಕೂರಬಹುದು. ಬಸ್‌ ನಿಲ್ದಾಣ, ಪಾರ್ಕ್‌, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಇಡಲಾಗಿದ್ದು, ನಗರದ ಸೌಂದರ್ಯವನ್ನು ಇವು ಹೆಚ್ಚಿಸಿವೆಯಂತೆ.

ಪ್ಲಾಸ್ಟಿಕ್‌ ತ್ಯಾಜ್ಯವನ್ನು ಒಟ್ಟುಗೂಡಿಸಿ, ಚಿಪ್‌ಗಳಂತೆ ಮಾಡಿ ನಂತರ 3ಡಿ ಪ್ರಿಂಟಿಂಗ್‌ ಮೂಲಕ ಕುರ್ಚಿಗಳನ್ನು ಸಿದ್ಧಪಡಿಸಲಾಗುತ್ತದೆ. ಈ ಕುರ್ಚಿಗಳನ್ನೂ ಮರುಬಳಕೆ ಮಾಡಬಹುದು.

ಜನರಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುತ್ತಲೇ, ಈಗಾಗಲೇ ಇರುವ ತ್ಯಾಜ್ಯವನ್ನು ಈ ರೀತಿ ಮರುಬಳಕೆಗೆ ಯತ್ನಿಸಲಾಗುತ್ತಿದೆ. ಇಂಥ ಆಲೋಚನೆ ಎಲ್ಲಾ ದೇಶಗಳಲ್ಲೂ ಫಲಿಸಿದರೆ, ಸ್ವಲ್ಪ ಮಟ್ಟಿಗಾದರೂ ಪ್ಲಾಸ್ಟಿಕ್ ಪರಿಣಾಮ ತಡೆಯಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT