ಏನು ಮಾದಕವೀ ಮುತ್ತಿನ ಮೇಕಪ್

7

ಏನು ಮಾದಕವೀ ಮುತ್ತಿನ ಮೇಕಪ್

Published:
Updated:
ಏನು ಮಾದಕವೀ ಮುತ್ತಿನ ಮೇಕಪ್

ಮುತ್ತು ಎಲ್ಲಾ ಕಾಲಕ್ಕೂ ಸಲ್ಲುವ ಆಭರಣವೇ. ಸಾಂಪ್ರದಾಯಿಕವಿರಲಿ, ಆಧುನಿಕವಿರಲಿ, ಮಹಿಳೆಯರನ್ನು ಸಿಂಗರಿಸುವ ಪೈಕಿ ಮುತ್ತನ್ನು ಮೆಚ್ಚುವವರೇ ಹೆಚ್ಚು. ಆದರೆ ಇದು ಬರೀ ಆಭರಣಗಳಲ್ಲಿದ್ದರೆ ಸಾಕೇ? ಮುತ್ತನ್ನು ಮೇಕಪ್‌ಗೂ ಒಗ್ಗಿಸಿಕೊಂಡರೆ? ಸೌಂದರ್ಯಕ್ಕೆ ಇಂಬು ಕೊಟ್ಟಂತೆ.

ಮುತ್ತಿನಂತೆಯೇ ಮಿರುಗುವ ಮಿಂಚಿನ ಮೇಕಪ್‌ಗೆ (ಗ್ಲಿಟರ್ ಮೇಕಪ್)ಬದಲಾಗಿ ಹುಟ್ಟಿಕೊಂಡದ್ದೇ ಈ ಪರ್ಲ್ ಮೇಕಪ್ ಟ್ರೆಂಡ್. ಮುತ್ತಿನಿಂದಲೇ ಪ್ರೇರಿತವಾದ, ನಿಜವಾದ ಮುತ್ತನ್ನೇ ಬಳಸಿ ಮುಖಕ್ಕೆ ಅಲಂಕಾರ ಮಾಡಿಕೊಂಡು ರ್‍ಯಾಂಪ್‌ ಮೇಲೆ, ಪಾರ್ಟಿಗಳಲ್ಲಿ ಮಿಂಚುತ್ತಿದ್ದಾರೆ ತರುಣಿಯರು.

ಫ್ಯಾಷನ್‌ ಶೋಗಳಲ್ಲಿ ಸಾಕಷ್ಟು ಹುಡುಗಿಯರ ಮನವನ್ನೂ ಗೆದ್ದಿದೆ ಈ ಟ್ರೆಂಡ್. ಹುಬ್ಬುಗಳ ಮೇಲೆ, ತುಟಿಗಳ ಮೇಲೆ, ಕಣ್ಣಿನ ಕೆಳಗೆ, ಕೆನ್ನೆಗಳ ಮೇಲೆ, ಗದ್ದಕ್ಕೆ, ಹಣೆಗೆ ಒಟ್ಟಾರೆ ಮುಖವನ್ನು ಮುತ್ತಿನಂತೆಯೇ ಹೊಳೆಯುವಂತೆ ಮಾಡುವ ಮೇಕಪ್ ಇದು. ಬೋಲ್ಡ್ ಮೇಕಪ್ ಪ್ರಿಯರು, ಹುಬ್ಬಿನ ಮೇಲೆ ಮುತ್ತನ್ನು ಸಾಲಿನಲ್ಲಿ ಜೋಡಿಸಿಕೊಳ್ಳಬಹುದು. ಕಣ್ಣ ಹನಿಗಳಂತೆ ಕಾಣಿಸಲು ಕಣ್ಣಿನ ಕೆಳಗೆ ಮುತ್ತುಗಳನ್ನು ಸಾಲಾಗಿ ಅಂಟಿಸಿಕೊಳ್ಳುವುದು ಕೂಡ ಮೇಕಪ್‌ನ ಒಂದು ಭಾಗ.

ಇಲ್ಲಿವೆ ಮುತ್ತಿನ ಮೇಕಪ್‌ನ ಝಲಕ್‌ಗಳು...

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry