ಧಾರವಾಡದಲ್ಲಿ ಅಗ್ನಿ ಆಕಸ್ಮಿಕ: ಭತ್ತದ ಬಣವೆಗಳಿಗೆ ಹಾನಿ

7

ಧಾರವಾಡದಲ್ಲಿ ಅಗ್ನಿ ಆಕಸ್ಮಿಕ: ಭತ್ತದ ಬಣವೆಗಳಿಗೆ ಹಾನಿ

Published:
Updated:
ಧಾರವಾಡದಲ್ಲಿ ಅಗ್ನಿ ಆಕಸ್ಮಿಕ: ಭತ್ತದ ಬಣವೆಗಳಿಗೆ ಹಾನಿ

ಧಾರವಾಡ: ಅಳ್ನಾವರ ಸಮೀಪದ ಕುಂಬಾರಕೊಪ್ಪ ಬಳಿಯ ಸಿಂಗನಕೊಪ್ಪ ಗ್ರಾಮದಲ್ಲಿ ಬುಧವಾರ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಭತ್ತದ 2 ಬಣವೆಗಳು ಸಂಪೂರ್ಣ ಸುಟ್ಟು ಹೋಗಿವೆ. 

ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಮನೆಗೂ ವ್ಯಾಪಿಸಿದ್ದರಿಂದ ಭಾಗಶಃ ಸುಟ್ಟಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಕೊಡಗಳಲ್ಲಿ ನೀರು ತಂದು ಹಾಕಿ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಅಲ್ಲಿ ಒಟ್ಟು 5 ಬಣವೆಗಳು ಇದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry