ಹೆಣ್ಣಿಗೆ ಅಗೌರವ: ಸಮೀಕ್ಷಾ ಬೇಸರ

7

ಹೆಣ್ಣಿಗೆ ಅಗೌರವ: ಸಮೀಕ್ಷಾ ಬೇಸರ

Published:
Updated:
ಹೆಣ್ಣಿಗೆ ಅಗೌರವ: ಸಮೀಕ್ಷಾ ಬೇಸರ

‘ಪಾರ್ಟಿ ಹಾಡುಗಳ ಸಾಹಿತ್ಯದಲ್ಲಿ ಹೆಣ್ಣಿಗೆ ಗೌರವವೇ ಇರುವುದಿಲ್ಲ’ ಎನ್ನುವುದು ಬಹುಕಾಲದಿಂದ ಪ್ರಚಲಿತದಲ್ಲಿರುವ ಮಾತು. ಇದೇ ಮಾತನ್ನು ಈಗ ನಟಿ ಸಮೀಕ್ಷಾ ಭಟ್ನಾಗರ್‌ ಆಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಪಾರ್ಟಿ ಹಾಡುಗಳಲ್ಲಿ ಹೆಣ್ಣನ್ನು ಅಗೌರವದಿಂದ ಕಾಣುವ ಕೆಟ್ಟ ಸಾಹಿತ್ಯವೇ ಎದ್ದು ಕಾಣುತ್ತಿದೆ. ರಿಯಾಲಿಟಿ ಶೋಗಳಲ್ಲಿ ಇಂಥ ಹಾಡುಗಳನ್ನು ಪುಟ್ಟಮಕ್ಕಳು ಹಾಡುತ್ತಾರೆ. ಇಂಥದ್ದೇ ಹಾಡುಗಳಿಗೆ ಡಾನ್ಸ್‌ ಮಾಡುತ್ತಾರೆ. ಐದು ವರ್ಷದ ಮಗು ‘ಹೇ ಸೆಕ್ಸಿ ಲೇಡಿ’ ಎಂದು ಹಾಡುವುದನ್ನು ಕೇಳುವುದು ಕಷ್ಟ’ ಎನ್ನುತ್ತಾರೆ ಸಮೀಕ್ಷಾ.

‘ಇಂಥ ಬೆಳವಣಿಗೆಗಳನ್ನು ಸೆನ್ಸಾರ್ ಹೇಗೆ ಸಹಿಸಿಕೊಳ್ಳುತ್ತದೆ? ನೆಚ್ಚಿನ ಗಾಯಕ ಹಾಡಿರಬಹುದು ಎಂದಾಕ್ಷಣ ಅಶ್ಲೀಲ ಸಾಹಿತ್ಯವನ್ನು ಸಹಿಸಿಕೊಳ್ಳಲು ಸಾಧ್ಯವೇ? ಹೆಣ್ಣನ್ನು ಮಾರುಕಟ್ಟೆ ಸರಕು, ಭೋಗದ ವಸ್ತು ಎಂಬಂತೆ ಬಿಂಬಿಸುವುದನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು? ಗಾಯಕರೂ ಸಹ ಹಾಡಿನ ಸಾಹಿತ್ಯ, ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಆಲೋಚಿಸಬೇಕಲ್ಲವೇ?’ ಎಂದು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಕ್ಯಾಲೆಂಡರ್‌ ಗರ್ಲ್ಸ್‌ ಮೂಲಕ ಬೆಳ್ಳಿತೆರೆಗೆ ಬಂದ ಸಮೀಕ್ಷಾ ಅಭಿನಯದ ‘ಪೋಸ್ಟರ್‌ ಬಾಯ್ಸ್‌’ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಸಮೀಕ್ಷಾ ಹಲವು ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry