ನಾರಾಯಣ ಮೂರ್ತಿ ಅಳಿಯ ಬ್ರಿಟನ್ ಸಚಿವ

7

ನಾರಾಯಣ ಮೂರ್ತಿ ಅಳಿಯ ಬ್ರಿಟನ್ ಸಚಿವ

Published:
Updated:
ನಾರಾಯಣ ಮೂರ್ತಿ ಅಳಿಯ ಬ್ರಿಟನ್ ಸಚಿವ

ಲಂಡನ್ (ಪಿಟಿಐ): ಇನ್ಫೊಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಶಿ ಸುನಕ್ (37) ಅವರು ಬ್ರಿಟನ್ ಸಚಿವ

ಸಂಪುಟಕ್ಕೆ ಹೊಸದಾಗಿ ಸೇರ್ಪಡೆ ಯಾಗಿದ್ದಾರೆ.

ಪ್ರಧಾನಿ ತೆರೆಸಾ ಮೇ ಅವರು ಇತ್ತೀಚೆಗೆ ಸಂಪುಟವನ್ನು ಪುನರ್‌ರಚಿಸಿದ್ದಾರೆ. ಆ ವೇಳೆ ಸಂಪುಟಕ್ಕೆ ಸೇರಿದ ಮೂವರು ಸಂಸದರಲ್ಲಿ ರಿಶಿ (37) ಅವರೂ ಒಬ್ಬರು. ರಿಚ್‌ಮಂಡ್‌ ಕ್ಷೇತ್ರದಿಂದ (ಯಾರ್ಕ್‌ಶೈರ್) ಕನ್ಸರ್ವೇಟಿವ್ ಪಕ್ಷದ ಸಂಸದರಾಗಿ ಅವರು ಆಯ್ಕೆಯಾಗಿದ್ದಾರೆ.

ವಸತಿ, ಸಮುದಾಯಗಳು ಮತ್ತು ಸ್ಥಳೀಯ ಆಡಳಿತ ಸಚಿವಾಲಯದ ಸಂಸದೀಯ ಕಾರ್ಯದರ್ಶಿಯಾಗಿ ಅವರನ್ನು ನೇಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry