ಲಂಡನ್: ಬಾಲಕರಿಂದ ಭಾರತೀಯನ ಹತ್ಯೆ

7

ಲಂಡನ್: ಬಾಲಕರಿಂದ ಭಾರತೀಯನ ಹತ್ಯೆ

Published:
Updated:

ಲಂಡನ್ : ಸಿಗರೇಟ್ ತಯಾರಿಸಲು ಬಳಸುವ ಕಾಗದವನ್ನು ಬಾಲಕರಿಗೆ ನೀಡಲು ನಿರಾಕರಿಸಿದ ಭಾರತ ಸಂಜಾತ, ಅಂಗಡಿಯ ಮಾಲೀಕನಿಗೆ ಬಾಲಕರ ಗುಂಪೊಂದು ಗುದ್ದಿದ ಪರಿಣಾಮ ಆತ ಮೃತಪಟ್ಟಿದ್ದಾರೆ.

ಉತ್ತರ ಲಂಡನ್ನಿನಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿದ್ದು, ವಿಜಯ್ ಪಟೇಲ್ (49) ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 16 ವರ್ಷ‌ದ ಬಾಲಕನೊಬ್ಬ ನ್ಯಾಯಾಲಯದ ಎದುರು ಹಾಜರಾಗಿದ್ದಾನೆ. ಆತನ ವಿರುದ್ಧ ಕೊಲೆ ಪ್ರಕರಣ ಹೊರಿಸಲಾಗಿದೆ. ಪಟೇಲ್ ಅವರ ಭಾವಚಿತ್ರವನ್ನು ಬಿಡುಗಡೆ ಮಾಡಿರುವ ಅವರ ಕುಟುಂಬದವರು, ಪ್ರಕರಣದಲ್ಲಿ ಶಾಮೀಲಾಗಿರುವ ಇತರರನ್ನೂ ಬಂಧಿಸುವಂತೆ ಆಗ್ರಹಿಸಿದ್ದಾರೆ.

ವಿಜಯ್ ಅವರ ಎದೆ ಮೇಲೆ ಗುದ್ದಿದಾಗ ಅವರು ನೆಲಕ್ಕೆ ಬಿದ್ದಿದ್ದಾರೆ. ಆಗ ತಲೆಗೆ ಪೆಟ್ಟಾಗಿದೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ. ಪಟೇಲ್ ಅವ

ರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಕುಟುಂಬಕ್ಕೆ ನೆರವು ನೀಡಲು ಅಂತರ್ಜಾಲದಲ್ಲಿ ಮನವಿ ಮಾಡಲಾಗಿದ್ದು, ಈವರೆಗೆ ₹ 13 ಲಕ್ಷ (15,000 ಪೌಂಡ್) ಸಂಗ್ರಹವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry