ಜೂಲಿಯನ್ ಅಸಾಂಜ್ ಪ್ರಕರಣ ಮಧ್ಯವರ್ತಿ ನಿರೀಕ್ಷೆಯಲ್ಲಿ ಈಕ್ವೆಡಾರ್

7

ಜೂಲಿಯನ್ ಅಸಾಂಜ್ ಪ್ರಕರಣ ಮಧ್ಯವರ್ತಿ ನಿರೀಕ್ಷೆಯಲ್ಲಿ ಈಕ್ವೆಡಾರ್

Published:
Updated:

ಕ್ವಿಟೊ: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರ ಕುರಿತು ನಿರ್ಧಾರ ಕೈಗೊಳ್ಳುವ ಸಂಬಂಧ ಮಧ್ಯವರ್ತಿಯ ಸಹಾಯದ ನಿರೀಕ್ಷೆಯಲ್ಲಿ ಈಕ್ವೆಡಾರ್ ಇದೆ.

‘ಐದು ವರ್ಷಗಳ ಬಿಕ್ಕಟ್ಟನ್ನು ಬಗೆಹರಿಸುವ ಸಲುವಾಗಿ ಮಧ್ಯವರ್ತಿಯ ನೆರವಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ವಿದೇಶಾಂಗ ಸಚಿವೆ ಮರಿಯಾ ಫೆರ್ನಂಡಾ ಎಸ್ಪಿನೋಸಾ ತಿಳಿಸಿದ್ದಾರೆ.

ಸ್ವೀಡನ್ನಿನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧನದಿಂದ ತಪ್ಪಿಸಿಕೊಳ್ಳುಲು ಅಸಾಂಜ್ 2012ರಲ್ಲಿ, ಲಂಡನ್ನಿನಲ್ಲಿರುವ ಈಕ್ವೆಡಾರ್ ದೂತಾವಾಸದ ಮೊರೆ ಹೋಗಿದ್ದರು. ಈಗ ಈ ಪ್ರಕರಣವನ್ನು ಕೈಬಿಡಲಾಗಿದೆ.

ಅಮೆರಿಕ ಸೇನೆಗೆ ಸಂಬಂಧಿಸಿದ ದಾಖಲೆಗಳನ್ನು 2010ರಲ್ಲಿ ವಿಕಿಲೀಕ್ಸ್ ಮೂಲಕ ಸೋರಿಕೆ ಮಾಡಿದ್ದ ಪ್ರಕರಣದ ಸಂಬಂಧ ಅಮೆರಿಕಕ್ಕೆ ಗಡಿಪಾರಾಗುವ ಮತ್ತು ಅಲ್ಲಿ ವಿಚಾರಣೆಗೆ ಒಳಗಾಗುವ ಭೀತಿಯಲ್ಲಿ ಅಸಾಂಜ್ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry