ಮಾರುತಿ, ಹೋಂಡಾ ಬೆಲೆ ಏರಿಕೆ

7

ಮಾರುತಿ, ಹೋಂಡಾ ಬೆಲೆ ಏರಿಕೆ

Published:
Updated:

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾ ಮತ್ತು ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಗರಿಷ್ಠ

₹ 32,000ದ ವರೆಗೂ ಏರಿಕೆ ಮಾಡಿವೆ.

ತಯಾರಿಕಾ ವೆಚ್ಚ ಹೆಚ್ಚುತ್ತಿರುವುದರಿಂದ ಬೆಲೆ ಏರಿಕೆ ಮಾಡುತ್ತಿರುವುದಾಗಿ ಕಂಪನಿಗಳು ಹೇಳಿವೆ.

ಹಲವು ಆರ್ಥಿಕ ವಿದ್ಯಮಾನಗಳ ಜತೆಗೆ ಜಾಗತಿಕ ಮಟ್ಟದಲ್ಲಿ ಕಚ್ಚಾ ಸರಕುಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ವಾಹನಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಮಹೀಂದ್ರಾ ಮತ್ತು ಫೋಕ್ಸ್‌ವ್ಯಾಗನ್‌ ಕಂಪನಿಗಳು ತಿಳಿಸಿವೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ವಿವಿಧ ಮಾದರಿಗಳ ಮೇಲೆ ₹ 1,700 ರಿಂದ ₹ 17,000ದವರೆಗೂ ಬೆಲೆ ಏರಿಕೆ ಮಾಡಲಾಗಿದೆ ಎಂದು ಮಾರುತಿ ಸುಜಕಿ ಇಂಡಿಯಾ ತಿಳಿಸಿದೆ.

ಜನವರಿ 8 ರಿಂದ ಅನ್ವಯಿಸುವಂತೆ ₹ 6,000 ದಿಂದ ₹ 32,000ದವರೆಗೆ ಬೆಲೆ ಏರಿಕೆ ಮಾಡಿರುವುದಾಗಿ ಹೋಂಡಾ ಕಾರ್ಸ್‌ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ಅಕಾರ್ಡ್‌ ಹೈಬ್ರಿಡ್ ಮಾದರಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.

ಜನವರಿ 1 ರಿಂದಲೇ ಅನ್ವಯಿಸುವಂತೆ ಟಾಟಾ ಮೋಟಾರ್ಸ್‌ ₹ 25,000ದವರೆಗೆ ಮತ್ತು ಫೋರ್ಡ್‌ ಇಂಡಿಯಾ ಶೇ 4 ರಷ್ಟು ಬೆಲೆ ಏರಿಕೆ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry