ಭದ್ರತೆ ಒದಗಿಸಿ

7

ಭದ್ರತೆ ಒದಗಿಸಿ

Published:
Updated:

ಬಾರ್‌ಗೆ ಬೆಂಕಿ ಹತ್ತಿಕೊಂಡು ಐವರು ಕೆಲಸಗಾರರು ಸಾವನ್ನಪ್ಪಿದ್ದು, ಸೋಮಸುಂದರ ಪಾಳ್ಯದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಎಸ್‌ಟಿಪಿ ಸ್ವಚ್ಛಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡದ್ದು, ರಾಜ ಕಾಲುವೆಯಲ್ಲಿ ಎರಡೂವರೆ ವರ್ಷದ ಮಗು ಬಿದ್ದು ಸತ್ತಿದ್ದು... ಇವು ಬೆಂಗಳೂರಿನಲ್ಲಿ ಈ ವಾರ ದಾಖಲಾದ ಕೆಲವು ದಾರುಣ ಸಾವಿನ ಪ್ರಕರಣಗಳು.

ದಯನೀಯ ಸಂಗತಿಯೆಂದರೆ ಈ ಎಲ್ಲಾ ಕುಟುಂಬಗಳು ಹೊಟ್ಟೆಪಾಡಿಗಾಗಿ ಹಳ್ಳಿಯನ್ನು ಬಿಟ್ಟು ಬಂದು ನಗರದಲ್ಲಿ ಬದುಕ ಕಟ್ಟಿಕೊಂಡಿದ್ದವರು. ಅವರಲ್ಲಿ ಕೆಲವರು ತಮ್ಮ ಸಂಸಾರದ ಆಧಾರ ಸ್ತಂಭವಾಗಿದ್ದವರು.

ಸತ್ತಾಗ ಹೋಗಿ, ಒಂದಿಷ್ಟು ಪರಿಹಾರವನ್ನು ಕೊಟ್ಟು ಕೈ ತೊಳೆದುಕೊಳ್ಳುವ ಬದಲು ನಮ್ಮ ಸರ್ಕಾರಗಳು ಇಂತಹ ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅವರ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಸುರಕ್ಷಾ ಕ್ರಮಗಳನ್ನು ತಪ್ಪದೆ ಪಾಲಿಸುವ ನಿಯಮ ಜಾರಿಗೊಳಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry