12 ಸಂಸ್ಥೆಗಳ ವಿರುದ್ಧ ಎಸ್‌ಬಿಐ ಕ್ರಮ: ಸಾಲ ವಸೂಲಿ ಪ್ರಕ್ರಿಯೆ ಶೀಘ್ರ

7

12 ಸಂಸ್ಥೆಗಳ ವಿರುದ್ಧ ಎಸ್‌ಬಿಐ ಕ್ರಮ: ಸಾಲ ವಸೂಲಿ ಪ್ರಕ್ರಿಯೆ ಶೀಘ್ರ

Published:
Updated:
12 ಸಂಸ್ಥೆಗಳ ವಿರುದ್ಧ ಎಸ್‌ಬಿಐ ಕ್ರಮ: ಸಾಲ ವಸೂಲಿ ಪ್ರಕ್ರಿಯೆ ಶೀಘ್ರ

ನವದೆಹಲಿ : ಹನ್ನೆರಡು ಉದ್ದಿಮೆ ಸಂಸ್ಥೆಗಳಿಂದ ದೊಡ್ಡ ಮೊತ್ತದ ಸಾಲ ವಸೂಲಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೀಘ್ರದಲ್ಲಿಯೇ ಚಾಲನೆ ನೀಡಲಿದೆ.

‘ಈ 12 ಉದ್ದಿಮೆ ಸಂಸ್ಥೆಗಳು ಉಳಿಸಿಕೊಂಡಿರುವ ಒಟ್ಟಾರೆ ಸಾಲದ ಪ್ರಮಾಣವು ₹ 1.75 ಲಕ್ಷ ಕೋಟಿಗಳಷ್ಟಿದೆ. ಈಗಾಗಲೇ ಎಲೆಕ್ಟ್ರೊಸ್ಟೀಲ್‌ ಆ್ಯಂಡ್‌ ಮಾನೆಟ್‌ ಇಸ್ಪಟ್‌ ವಿರುದ್ಧದ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಜನವರಿ ತಿಂಗಳ ಅಂತ್ಯದ ಒಳಗೆ  ಉಳಿದ ಪ್ರಕರಣಗಳಲ್ಲಿಯೂ ಬಿಡ್‌ ಸ್ವೀಕರಿಸುವ ಬಗ್ಗೆ ನಾವು ಆಶಾವಾದ ಹೊಂದಿದ್ದೇವೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಅನ್ವಯ, ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಇರುವ ಪ್ರಕರಣಗಳ ವಿವರ ಹೀಗಿದೆ– ಎಸ್ಸಾರ್‌ ಸ್ಟೀಲ್‌, ಭೂಷಣ್‌ ಸ್ಟೀಲ್‌, ಭೂಷಣ್‌ ಪವರ್‌ ಆ್ಯಂಡ್ ಸ್ಟೀಲ್‌, ಲ್ಯಾಂಕೊ ಇನ್‌ಫ್ರಾ, ಅಲೋಕ್‌ ಇಂಡಸ್ಟ್ರೀಸ್‌, ಅಮ್ಟೆಕ್‌ ಆಟೊ, ಇರಾ ಇನ್‌ಫ್ರಾ, ಜಯಪೀ ಇನ್‌ಫ್ರಾಟೆಕ್‌, ಎಬಿಜಿ ಶಿಪ್‌ಯಾರ್ಡ್‌ ಮತ್ತು ಜ್ಯೋತಿ ಸ್ಟ್ರಕ್ಚರ್ಸ್‌.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಆಂತರಿಕ ಸಲಹಾ ಸಮಿತಿ ಕಳೆದ ವರ್ಷದ ಜೂನ್‌ನಲ್ಲಿ ಗುರುತಿಸಿರುವ ಈ 12 ಖಾತೆಗಳಲ್ಲಿ ಪ್ರತಿಯೊಂದು ₹ 5 ಸಾವಿರ ಕೋಟಿಗಿಂತ ಹೆಚ್ಚಿನ ಸಾಲ ಬಾಕಿ ಉಳಿಸಿಕೊಂಡಿವೆ. ಬ್ಯಾಂಕ್‌ಗಳ ಒಟ್ಟಾರೆ ‘ಎನ್‌ಪಿಎ’ದಲ್ಲಿ  ಇವುಗಳ ಪಾಲು ಶೇ 25ರಷ್ಟು ಇದೆ.

ಆರ್‌ಬಿಐ, ಇತ್ತೀಚೆಗೆ ಇನ್ನೂ 28 ‘ಎನ್‌ಪಿಎ’ ಖಾತೆಗಳ ಎರಡನೆ ಪಟ್ಟಿ ಬಿಡುಗಡೆ ಮಾಡಿದೆ. ಈ ಖಾತೆಗಳ ಸಾಲ ವಸೂಲಿ ಮಾಡಲು ಅದು ಸಾಧ್ಯವಾಗದಿದ್ದರೆ ‘ಎನ್‌ಸಿಎಲ್‌ಟಿ’ಗೆ ಶಿಫಾರಸು ಮಾಡುವಂತೆ ಸೂಚನೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry