ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಮೆಸ್‌ ಮೇಲೆ ಶೇ 5 ಜಿಎಸ್‌ಟಿ

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಾಸ್ಟೆಲ್‌ಗಳಲ್ಲಿ ಮೆಸ್‌ ಅಥವಾ ಕ್ಯಾಂಟೀನ್ ಸೇವೆ ನೀಡುವುದಕ್ಕೂ ಶೇ 5 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ಕಟ್ಟಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಶಿಕ್ಷಣ ಸಂಸ್ಥೆಗಳಾಗಲಿ ಅಥವಾ ಹೊರಗುತ್ತಿಗೆ ಮೂಲಕವೇ ಆಗಲಿ ಮೆಸ್‌ ಸೌಲಭ್ಯ ನೀಡುವುದಕ್ಕೆ ಈ ಪ್ರಮಾಣದ ತೆರಿಗೆ ಕಡ್ಡಾಯವಾಗಿದೆ. ಇದಕ್ಕೆ ಯಾವುದೇ ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್ ಇರುವುದಿಲ್ಲ .

ಕಾಲೇಜ್‌ ಹಾಸ್ಟೆಲ್‌ಗಳು ಮೆಸ್‌ ಸೇವೆ ಒದಗಿಸುವುದಕ್ಕೆ ಜಿಎಸ್‌ಟಿಯಲ್ಲಿ ಯಾವ ಪ್ರಮಾಣದ ತೆರಿಗೆ ಕಟ್ಟಬೇಕು ಎನ್ನುವ ಪ್ರಶ್ನೆಗೆ ಕೇಂದ್ರೀಯ ಎಕ್ಸೈಸ್ ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಇಸಿ) ಈ ಸ್ಪಷ್ಟನೆ ನೀಡಿದೆ.

ಜಿಎಸ್‌ಟಿಯಲ್ಲಿ ನಾಲ್ಕು ಹಂತದ (ಶೇ 5, ಶೇ 12, ಶೇ 18 ಮತ್ತು ಶೇ 28) ತೆರಿಗೆ ವ್ಯಾಪ್ತಿಯೊಳಗೆ ವಿವಿಧ ಸರಕುಗಳನ್ನು ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT