ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅಂಚಲ್‌

7

ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅಂಚಲ್‌

Published:
Updated:
ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅಂಚಲ್‌

ನವದೆಹಲಿ: ಆಂಚಲ್ ಠಾಕೂರ್‌ ಅವರು ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಆಂಚಲ್ ಅವರು  ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿಯಾಗಿದ್ದಾರೆ.

ಹಿಮಪ್ರದೇಶಗಳಲ್ಲಿ ನಡೆಯುವ ಸಾಹಸ ಕ್ರೀಡೆ ಇದಾಗಿದೆ. ಆದರೆ ತಮ್ಮ ಸಾಧನೆಯನ್ನು ಭಾರತ ಸರ್ಕಾರವು ಗುರುತಿಸಿಲ್ಲ. ಅಭಿನಂದನೆ ಕೂಡ ಸಲ್ಲಿಸಿಲ್ಲ ಎಂದು ಆಂಚಲ್ ದೂರಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಸಾಧನೆಯನ್ನು ಗುರುತಿಸಿಲ್ಲ. ಟ್ವೀಟ್ ಕೂಡ ಮಾಡಿಲ್ಲ. ನಮ್ಮ ದೇಶದಲ್ಲಿ ಜನಪ್ರಿಯ ಕ್ರೀಡೆಗೆ ಮಾತ್ರ ಪ್ರಾಮುಖ್ಯತೆ ಸಿಗುತ್ತದೆ. ಅಪರೂಪದ ಸಾಧನೆಗಳನ್ನು ಇಲ್ಲಿ ಗುರುತಿಸುತ್ತಿಲ್ಲ’ ಎಂದು ಅಂಚಲ್ ಹೇಳಿದ್ದಾರೆ.

‘ನನ್ನನ್ನು ಗುರುತಿಸದಿದ್ದರೂ ಬೇಸರವಿಲ್ಲ. ಭಾರತಕ್ಕೆ ಪದಕ ತಂದುಕೊಡಲು ಸಾಕಷ್ಟು ಶ್ರಮ ಹಾಕಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಗುರಿ ಹೊಂದಿದ್ದೇನೆ’ ಎಂದು ಅಂಚಲ್ ಹೇಳಿದ್ದಾರೆ.

ಭಾರತ ಚಳಿಗಾಲದ ಫೆಡರೇಷನ್‌ಗೆ ಅಂಚಲ್ ಅವರ ತಂದೆ ರೋಷನ್ ಠಾಕೂರ್‌ ಕಾರ್ಯದರ್ಶಿ ಆಗಿದ್ದಾರೆ. ‘ಸ್ಕೀಯಿಂಗ್‌ನಲ್ಲಿ ನನ್ನ ಮಕ್ಕಳಿಗೆ ಮೊದಲಿನಿಂದಲೂ ಸಾಕಷ್ಟು ಆಸಕ್ತಿ ಇದೆ. ಮಗ ಹಿಮಾಂಶು ಕೂಡ ಇದೇ ಕ್ರೀಡೆಯಲ್ಲಿ ಮುಂದುವರಿಯುವ  ಗುರಿ ಇಟ್ಟಿದ್ದಾನೆ’ ಎಂದು ರೋಷನ್ ಹೇಳಿದ್ದಾರೆ.

ಹಿಮಾಂಶು ಕೂಡ ಸೋಚಿ ವಿಂಟರ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry