ಅಂಧರ ವಿಶ್ವಕಪ್‌ ಕ್ರಿಕೆಟ್‌: ದೀಪಕ್‌ ಮಲ್ಲಿಕ್ ಶತಕದ ಮಿಂಚು

7

ಅಂಧರ ವಿಶ್ವಕಪ್‌ ಕ್ರಿಕೆಟ್‌: ದೀಪಕ್‌ ಮಲ್ಲಿಕ್ ಶತಕದ ಮಿಂಚು

Published:
Updated:

ನವದೆಹಲಿ: ಹರಿಯಾಣದ ಬ್ಯಾಟ್ಸ್‌ಮನ್ ದೀಪಕ್ ಮಲ್ಲಿಕ್ (ಅಜೇಯ 179) ಅವರ ಸ್ಪೋಟಕ ಶತಕದ ನೆರವಿನಿಂದ ಭಾರತ ತಂಡ ಜಯಭೇರಿ ದಾಖಲಿಸಿದೆ.

ಯುಎಇನಲ್ಲಿ ನಡೆದ ಅಂಧರ ವಿಶ್ವಕಪ್‌ ಕ್ರಿಕೆಟ್ ಮೊದಲ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್‌ಗಳಿಂದ ಶ್ರೀಲಂಕಾ ಎದುರು ಗೆದ್ದಿದೆ.

ಟಾಸ್ ಗೆದ್ದುಕೊಂಡ ಭಾರತ ತಂಡ ಮೊದಲು ಕ್ಷೇತ್ರರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾ 40 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 357 ರನ್‌ ದಾಖಲಿಸಿತು. ಸವಾಲಿನ ಮೊತ್ತದ ಎದುರು ಎದೆಗುಂದದೆ ಆಡಿದ ಭಾರತದ ಬ್ಯಾಟ್ಸ್‌ಮನ್‌ಗಳು ಮಿಂಚು ಹರಿಸಿದರು. ದೀಪಕ್‌ 103 ಎಸೆತಗಳಲ್ಲಿ 179 ರನ್‌ ಪೇರಿಸಿದರು. ಅಜಯ್ ರೆಡ್ಡಿ (9), ಪ್ರಕಾಶ್‌ ಜಯರಾಮಯ್ಯ (76) ನೆರವಾದರು.

ಶ್ರೀಲಂಕಾ ತಂಡದ ಸುರಂಗಾ ಸಂಪತ್‌ 68 ರನ್‌ ಗಳಿಸಿದರೆ, ಕೆ.ಎ.ಸಿಲ್ವಾ 64 ರನ್ ಬಾರಿಸಿದರು. ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ತಂಡ 121 ರನ್ ದಾಖಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry