ಆಸ್ಟ್ರೇಲಿಯಾ ಓಪನ್ ಅರ್ಹತಾ ಟೆನಿಸ್‌ ಟೂರ್ನಿ: ಯೂಕಿ, ರಾಮನಾಥನ್‌ಗೆ ಜಯ

7

ಆಸ್ಟ್ರೇಲಿಯಾ ಓಪನ್ ಅರ್ಹತಾ ಟೆನಿಸ್‌ ಟೂರ್ನಿ: ಯೂಕಿ, ರಾಮನಾಥನ್‌ಗೆ ಜಯ

Published:
Updated:
ಆಸ್ಟ್ರೇಲಿಯಾ ಓಪನ್ ಅರ್ಹತಾ ಟೆನಿಸ್‌ ಟೂರ್ನಿ: ಯೂಕಿ, ರಾಮನಾಥನ್‌ಗೆ ಜಯ

ಮೆಲ್ಬರ್ನ್‌: ಭಾರತದ ಅಗ್ರ ರ‍್ಯಾಂಕಿಂಗ್ ಆಟಗಾರರಾದ ಯೂಕಿ ಭಾಂಬ್ರಿ ಹಾಗೂ ರಾಮ್‌ಕುಮಾರ್ ರಾಮನಾಥನ್‌ ಬುಧವಾರ ನಡೆದ ಆಸ್ಟ್ರೇಲಿಯಾ ಓಪನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಯಿಸಿದ್ದಾರೆ.

ಭಾರತದವರೇ ಆದ ಸುಮಿತ್ ನಗಾಲ್ ಮತ್ತು ಪ್ರಜ್ಞೇಶ್ ಗುಣೇಶ್ವರನ್ ಸೋತಿದ್ದಾರೆ.

15ನೇ ಶ್ರೇಯಾಂಕದ ಯೂಕಿ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 1–6, 6–3, 6–4ರಲ್ಲಿ ಕೆನಡಾದ ಬರ್ಡಿ ಸಚ್ನರ್ ವಿರುದ್ಧ ಗೆದ್ದರು. ಮುಂದಿನ ಪಂದ್ಯದಲ್ಲಿ ಅವರು ಸ್ಪೇನ್‌ನ ಕಾರ್ಲೋಸ್ ಟಬೆನರ್ ವಿರುದ್ಧ ಆಡಲಿದ್ದಾರೆ.

ಮೊದಲ ಸೆಟ್‌ನಲ್ಲಿ ತೀವ್ರ ಹಿನ್ನಡೆಯೊಂದಿಗೆ ಸೋತಿದ್ದ ಯೂಕಿ ಎರಡು ಮತ್ತು ಮೂರನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಮೊದಲ ಸೆಟ್‌ನಲ್ಲಿ ಭಾರತದ ಆಟಗಾರ ಕೇವಲ ಒಂದು ಗೇಮ್‌ ಮಾತ್ರ ಗೆದ್ದರು. ಆದರೆ ನಂತರದ ಸೆಟ್‌ಗಳಲ್ಲಿ ಅವರು ಚುರುಕಿನಿಂದ ಪೈಪೋಟಿ ನೀಡಿದರು.

ಎರಡನೇ ಸೆಟ್‌ನಲ್ಲಿ ಆರಂಭದಲ್ಲಿ ಒತ್ತಡಕ್ಕೆ ಒಳಗಾಗಿದ್ದ ಭಾರತದ ಆಟಗಾರ ಬಳಿಕ ಚೇತರಿಸಿಕೊಂಡು ಆಡಿದರು. ರಿಟರ್ನ್ಸ್‌ಗಳ ವೇಳೆ ಎದುರಾಳಿಯನ್ನು ತಬ್ಬಿಬ್ಬುಗೊಳಿ ಸುವ ಮೂಲಕ ಜಯ ಒಲಿಸಿಕೊಂಡರು.

ಕೆನಡಾದ ಯುವ ಆಟಗಾರ ಕೊನೆಯ ಸೆಟ್‌ನಲ್ಲಿ ತೀವ್ರ ಪೈಪೋಟಿ ಒಡ್ಡಿದರು. ಆದರೆ ತಪ್ಪುಗಳಿಂದಾಗಿ ಅವರಿಗೆ ಅನುಭವಿ ಆಟಗಾರ ಯೂಕಿಗೆ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.

28ನೇ ಶ್ರೇಯಾಂಕದ ರಾಮಕುಮಾರ್‌ 6–7, 7–6, 6–2ರಲ್ಲಿ ಅಮೆರಿಕದ ಬರ್ಡಿ ಕ್ಲಾನ್‌ಗೆ ಸೋಲುಣಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಭಾರತದ ರಾಮಕುಮಾರ್‌ ಫ್ರೆಂಚ್‌ನ ಗ್ಲೆನ್‌ ಸಕಾರೊವ್ ಎದುರು ಆಡಲಿದ್ದಾರೆ.

ಉತ್ತಮ ಪೈಪೋಟಿ ನೀಡಿದ ಪ್ರಜ್ಞೇಶ್‌ 1–6, 2–6, 6–2ರಲ್ಲಿ ಅವರು ಜರ್ಮಿನಿಯ ಟೊಬಿಯಾಸ್ ಕಮ್ಕೆ ಮೇಲೆ ಸೋತರು. ನಗಾಲ್‌ 6–7, 6–3, 3–6ರಲ್ಲಿ ಇಟಲಿಯ ಅಸ್ಲೆಂಡ್ರೊ ಗ್ಲೆನ್ಸಿ ವಿರುದ್ಧ ಪರಾಭವಗೊಂಡರು. ನಗಾಲ್‌ ಇತ್ತೀಚೆಗೆ ಪುಣೆಯಲ್ಲಿ ನಡೆದ ಎಟಿಪಿ ವಿಶ್ವ ಸರಣಿಯಲ್ಲಿ ಮೊದಲ ಬಾರಿಗೆ ಆಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry