ರಾಷ್ಟ್ರೀಯ ಮಹಿಳೆಯರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ : ಸೆಮಿಫೈನಲ್‌ಗೆ ಸೋನಿಯಾ, ಸರಿತಾ

7

ರಾಷ್ಟ್ರೀಯ ಮಹಿಳೆಯರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ : ಸೆಮಿಫೈನಲ್‌ಗೆ ಸೋನಿಯಾ, ಸರಿತಾ

Published:
Updated:

ರೋಹ್ಟಕ್‌ : ಎಲ್‌.ಸರಿತಾ ದೇವಿ ಹಾಗೂ ಸೋನಿಯಾ ಲಾಥರ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳೆಯರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಆಲ್‌ ಇಂಡಿಯಾ ಪೊಲೀಸ್ ತಂಡವನ್ನು ಪ್ರತಿನಿಧಿಸಿರುವ ಸರಿತಾ 60ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಂಧ್ರಪ್ರದೇಶದ ಆಕ್ವಿಲ್ಲಾ ದೂಪಕ್ ವಿರುದ್ಧ ಗೆದ್ದರು.

57ಕೆ.ಜಿ ವಿಭಾಗದಲ್ಲಿ ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ನ ಸೋನಿಯಾ 5–0ರಲ್ಲಿ ಉತ್ತರಾಖಂಡದ ಕಮಲಾ ಬಿಷ್ಠ್ ಅವರನ್ನು ಮಣಿಸಿದರು.

51ಕೆ.ಜಿ ವಿಭಾಗದಲ್ಲಿ ನಿಖತ್ ಜರೀನ್‌ ಛತ್ತೀಸಗಡದ ಆಬಾ ಎದುರು ಗೆದ್ದರು. ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಿಖತ್ ಪ್ರಶಸ್ತಿ ಗೆದ್ದಿದ್ದರು.

ಆರ್‌ಎಸ್‌ಪಿಬಿ ತಂಡದ ಪವಿತ್ರಾ 60ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಣಿಪುರದ ಚವೋಬಾ ದೇವಿ ಎದುರು ಅವರು ಗೆದ್ದರು. 48ಕೆ.ಜಿ ವಿಭಾಗದಲ್ಲಿ ಸರ್ಜುಬಾಲಾ ದೇವಿ 5–0ರಲ್ಲಿ ಮಧ್ಯಪ್ರದೇಶದ ದೀಪಾಕುಮಾರಿಗೆ ಸೋಲುಣಿಸಿದರು.

54ಕೆ.ಜಿ ವಿಭಾಗದಲ್ಲಿ ಶಿಖಾ ಸೋತಿದ್ದಾರೆ. ಆರ್‌ಎಸ್‌ಪಿಬಿ ತಂಡದ ಪರ ಆಡಿದ ಅವರು ಪಂಜಾಬ್‌ನ ಶವಿಂದರ್ ಕೌರ್ ಸಿಂಧು ಎದುರು ಪರಾಭವಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry