ಪ್ರೀಮಿಯರ್ ಬ್ಯಾಡ್ಮಿಂಟನ್: ಸೆಮಿಫೈನಲ್‌ ಪ್ರವೇಶದ ಕನಸಿನಲ್ಲಿ ಬೆಂಗಳೂರು

7

ಪ್ರೀಮಿಯರ್ ಬ್ಯಾಡ್ಮಿಂಟನ್: ಸೆಮಿಫೈನಲ್‌ ಪ್ರವೇಶದ ಕನಸಿನಲ್ಲಿ ಬೆಂಗಳೂರು

Published:
Updated:
ಪ್ರೀಮಿಯರ್ ಬ್ಯಾಡ್ಮಿಂಟನ್: ಸೆಮಿಫೈನಲ್‌ ಪ್ರವೇಶದ ಕನಸಿನಲ್ಲಿ ಬೆಂಗಳೂರು

ಗಚ್ಚಿಬೌಲಿ: ಬೆಂಗಳೂರು ಬ್ಲಾಸ್ಟರ್ಸ್ ತಂಡ ಸೆಮಿಫೈನಲ್‌ ತಲುಪುವ ಕನಸಿ ನೊಂದಿಗೆ ಗುರುವಾರ ತನ್ನ ಕೊನೆಯ ಲೀಗ್ ಪಂದ್ಯವನ್ನು ಹೈದರಾಬಾದ್ ಹಂಟರ್ಸ್ ಎದುರು ಆಡಲಿದೆ.

ಬೆಂಗಳೂರು ಹಾಗೂ ಹೈದರಾಬಾದ್ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಎರಡೂ ತಂಡಗಳ ಬಳಿ  ಕ್ರಮವಾಗಿ 15 ಮತ್ತು 14 ಪಾಯಿಂಟ್ಸ್‌ಗಳು ಇವೆ.

ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿರುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಉಳಿದ ಲೀಗ್ ಪಂದ್ಯಗಳ ಬಳಿಕ ಸೆಮಿಫೈನಲ್ ಪ್ರವೇಶಿಸುವ ತಂಡಗಳು ನಿರ್ಧಾರವಾಗಲಿದೆ. ಆದ್ದರಿಂದ ಹೈದರಾಬಾದ್ ಹಾಗೂ ಬೆಂಗಳೂರು ತಂಡ ಮೇಲಿನ ಸ್ಥಾನದೊಂದಿಗೆ ಸೆಮಿಫೈನಲ್ ತಲುಪುವ ಲೆಕ್ಕಾಚಾರದಿಂದ ಕಣಕ್ಕಿಳಿಯಲಿವೆ.

ಲೀಗ್‌ನಲ್ಲಿ ಮೊದಲ ಬಾರಿಗೆ ಹಂಟರ್ಸ್ ಎದುರು ಪಂದ್ಯ ಆಡುತ್ತಿರುವ ಬೆಂಗಳೂರಿನ ತಂಡ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಈ ತಂಡದಲ್ಲಿ ಆಡುವ ಕ್ಯಾರೊಲಿನಾ ಮರಿನ್‌, ಸಾಯಿಪ್ರಣೀತ್‌, ಸಾತ್ವಿಕ್ ಸಾಯಿರಾಜ್‌ ರಣಕಿರೆಡ್ಡಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಬ್ಲಾಸ್ಟರ್ಸ್ ಕೂಡ ಪ್ರಬಲವಾಗಿದೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ವಿಕ್ಟರ್‌ ಅಕ್ಸೆಲ್‌ಸನ್‌ ಇದುವರೆಗೆ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಿಸ್ಟಿ ಗ್ಲಿಮೊರ್‌ ಎದುರಾಳಿಯನ್ನು ಮಣಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಥಿಯಾಸ್ ಬೋಯ್‌ ಮತ್ತು ಕಿಮ್‌ ಸಾ ರಂಗ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಬಲವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry