ಕಾಂಗ್ರೆಸ್‌ ಸದಸ್ಯನಿಂದಲೇ ಸಿ.ಎಂಗೆ ಅವಮಾನ: ಆರೋಪ

7

ಕಾಂಗ್ರೆಸ್‌ ಸದಸ್ಯನಿಂದಲೇ ಸಿ.ಎಂಗೆ ಅವಮಾನ: ಆರೋಪ

Published:
Updated:
ಕಾಂಗ್ರೆಸ್‌ ಸದಸ್ಯನಿಂದಲೇ ಸಿ.ಎಂಗೆ ಅವಮಾನ: ಆರೋಪ

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಿಳಾ ಕಾಂಗ್ರೆಸ್‌ನ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಆ ಪಕ್ಷದ ಸದಸ್ಯರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಮಾನಿಸುವಂಥ ವಿಡಿಯೊ ಹಾಕಿದ್ದಾರೆ.

ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಮೋಹನ ಹಿರೇಮನಿ, ಸಿದ್ದರಾಮಯ್ಯ ಅವರನ್ನು ಚಿಂಪಾಂಜಿಗೆ ಹೋಲಿಸುವ ವಿಡಿಯೊವನ್ನು (ಜಿಪ್‌ ಫೈಲ್‌)  ಮಂಗಳವಾರ ರಾತ್ರಿ ಗ್ರೂಪ್‌ನಲ್ಲಿ ಹಾಕಿದ್ದಾರೆ. ಇದನ್ನು ಕಂಡು ಅಸಮಾಧಾನಗೊಂಡ ಗ್ರೂಪ್‌ ಸದಸ್ಯರು, ‘ಪಕ್ಷದ ನಾಯಕರನ್ನು ಹೀಗೆ ಅವಮಾನಿಸುತ್ತಾರಾ’ ಎಂದು ಪ್ರಶ್ನಿಸಿದ್ದಾರೆ. ನಂತರ, ಸದಸ್ಯರೊಬ್ಬರು ಹಿರೇಮನಿ ಅವರನ್ನು ಗ್ರೂಪ್‌ನಿಂದ ತೆಗೆದು ಹಾಕಿದ್ದಾರೆ.

ಸಚಿವರಾದ ಡಿ.ಕೆ. ಶಿವಕುಮಾರ್‌, ವಿನಯ ಕುಲಕರ್ಣಿ, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಈ ಗ್ರೂಪ್‌ನಲ್ಲಿದ್ದಾರೆ.

'ನಿನ್ನೆ (ಮಂಗಳವಾರ) ರಾತ್ರಿ ನನ್ನ ನಂಬರ್‌ನಿಂದ ಗ್ರೂಪ್‌ಗೆ ವಿಡಿಯೊ ಅಪ್ ಲೋಡ್ ಆಗಿದೆಯಂತೆ. ಆದರೆ, ಇದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಮೊಬೈಲ್‌ನಿಂದ ಬೇರೆ ಯಾರೋ ಅಪ್‌‌ಲೋಡ್ ಮಾಡಿರಬಹುದು' ಎಂದು ಮೋಹನ ಹಿರೇಮನಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry