ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ 4 ಹುಲಿ

7

ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ 4 ಹುಲಿ

Published:
Updated:
ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ 4 ಹುಲಿ

ಚಿಕ್ಕಮಗಳೂರು: ಇಲ್ಲಿನ ಭದ್ರಾ ಅರಣ್ಯದಲ್ಲಿ ಹುಲಿ ಗಣತಿ ನಡೆಯುತ್ತಿದ್ದು, ಮೂರನೇ ದಿನವಾದ ಬುಧವಾರ ಲಕ್ಕವಳ್ಳಿ ವಲಯದಲ್ಲಿ ನಾಲ್ಕು ಹುಲಿಗಳು ಕಾಣಿಸಿಕೊಂಡಿವೆ.

ಒಂದು ಕಡೆ ತಾಯಿಯೊಂದಿಗೆ ಎರಡು ಮರಿ, ಇನ್ನೊಂದು ಕಡೆ ಒಂದು ಹುಲಿ ಕಾಣಿಸಿಕೊಂಡಿವೆ. ಗಣತಿ ತಂಡಕ್ಕೆ ಆನೆ, ಜಿಂಕೆ, ಕಾಡೆಮ್ಮೆ, ಕಡವೆ, ನವಿಲು, ಪಕ್ಷಿಗಳು ಮುಖಾಮುಖಿಯಾಗಿವೆ.

ಲಕ್ಕವಳ್ಳಿ ವಲಯ ಅರಣ್ಯಧಿಕಾರಿ ರಾಘವೇಂದ್ರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಗಣತಿ ತಂಡಕ್ಕೆ ಎರಡು ಕಡೆ ಬುಧವಾರ ಹುಲಿಗಳ ದರ್ಶನವಾಯಿತು. ಒಂದು ಕಡೆ ಒಂದು ಹುಲಿ, ಇನ್ನೊಂದು ಕಡೆ ತಾಯಿಯೊಂದಿಗೆ ಎರಡು ಮರಿಗಳು ಕಾಣಿಸಿದವು’ ಎಂದರು. ಗುರುವಾರದಿಂದ ಮೂರು ದಿನ ಸಸ್ಯಾಹಾರಿ ಪ್ರಾಣಿಗಳ ಗಣತಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry