12 ಹುಲಿ, 3 ಚಿರತೆಗಳ ದರ್ಶನ

7
ಬಂಡೀಪುರ, ನಾಗರಹೊಳೆ, ಬಿಆರ್‌ಟಿಯಲ್ಲಿ ಗಣತಿ

12 ಹುಲಿ, 3 ಚಿರತೆಗಳ ದರ್ಶನ

Published:
Updated:
12 ಹುಲಿ, 3 ಚಿರತೆಗಳ ದರ್ಶನ

ಮೈಸೂರು: ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬುಧವಾರ ಒಟ್ಟು 12 ಹುಲಿಗಳು ಗಣತಿದಾರರ ಕಣ್ಣಿಗೆ ಕಾಣಿಸಿವೆ.

ಬಂಡೀಪುರದಲ್ಲಿ 6, ನಾಗರಹೊಳೆಯಲ್ಲಿ 4  ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿ 2 ಹುಲಿಗಳು ಸಿಕ್ಕಿವೆ. ಜತೆಗೆ ಹುಲಿಗಳ ಹೆಜ್ಜೆ ಗುರುತುಗಳು, ಮಲ ಹೇರಳವಾಗಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಡೀಪುರ ಅರಣ್ಯದ ಕುಂದುಕೆರೆ ವಲಯದಲ್ಲಿ 2, ಬಂಡೀಪುರ, ಮದ್ದೂರು, ಮಲಿಯೂರು ಹಾಗೂ ಎನ್.ಬೇಗೂರು ವಲಯದಲ್ಲಿ ತಲಾ ಒಂದೊಂದು ಹುಲಿ ಕಾಣಿಸಿಕೊಂಡಿದೆ. ನಾಗರಹೊಳೆಯ ಹುಣಸೂರಿನಲ್ಲಿ 2, ಡಿ.ಬಿ.ಕುಪ್ಪೆ, ಅಂತರಸಂತೆ ವಲಯಗಳಲ್ಲಿ ತಲಾ ಒಂದೊಂದು ಹುಲಿ ಗಣತಿದಾರರಿಗೆ ಸಿಕ್ಕಿದೆ.

ಇತರೆ ಪ್ರಾಣಿಗಳು: ಬಂಡೀಪುರದ ಮೂಲೆಹೊಳೆ, ಮಲಿಯೂರಿನಲ್ಲಿ ತಲಾ ಒಂದೊಂದು ಚಿರತೆ, ಗುಂಡ್ರೆಯಲ್ಲಿ 3 ಸೀಳು ನಾಯಿ ಹಾಗೂ 17 ಆನೆಗಳು, ಮದ್ದೂರಿನಲ್ಲಿ 12, ಜಿ.ಎಸ್.ಬೆಟ್ಟದಲ್ಲಿ 7, ಕುಂದುಕೆರೆಯಲ್ಲಿ 9, ಓಂಕಾರದಲ್ಲಿ 2, ಮಲಿಯೂರಿನಲ್ಲಿ 3 ಆನೆಗಳು ಗಣತಿದಾರರ ಕಣ್ಣಿಗೆ ಬಿದ್ದಿವೆ.

ಇಂದಿನಿಂದ ಸಸ್ಯಾಹಾರಿ ಪ್ರಾಣಿಗಳ ಗಣತಿ: ಈರೆಗೆ ಮಾಂಸಾಹಾರಿ ಪ್ರಾಣಿಗಳ ಗಣತಿ ನಡೆದಿದೆ. ಗುರುವಾರದಿಂದ 2 ದಿನಗಳ ಕಾಲ ನಿತ್ಯ ಪ್ರತಿ ಬೀಟ್‌ನಲ್ಲಿ 2 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಂಚರಿಸಿ ಸಸ್ಯಾಹಾರಿ ಪ್ರಾಣಿಗಳ ಗಣತಿ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry