ಸ್ಥಳೀಯರ ಅಪೇಕ್ಷೆಯಂತೆ ಟಿಕೆಟ್‌ ಹಂಚಿಕೆ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ

7

ಸ್ಥಳೀಯರ ಅಪೇಕ್ಷೆಯಂತೆ ಟಿಕೆಟ್‌ ಹಂಚಿಕೆ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ

Published:
Updated:
ಸ್ಥಳೀಯರ ಅಪೇಕ್ಷೆಯಂತೆ ಟಿಕೆಟ್‌ ಹಂಚಿಕೆ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ

ಬೀದರ್‌: ‘ಸ್ಥಳೀಯ ಮುಖಂಡರು ಹಾಗೂ ಜನರ ಅಪೇಕ್ಷೆಯ ಮೇರೆಗೆ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸಿ ಪಕ್ಷದ ಟಿಕೆಟ್‌ ಕೊಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹೇಳಿದರು.

‘ಪ್ರಭಾವಿ ನಾಯಕರ ಮಕ್ಕಳಿಗೆ ಮನ್ನಣೆ ನೀಡುವ ವಿಚಾರ ಸುಳ್ಳು. ಪಕ್ಷವು ಅಭ್ಯರ್ಥಿಗಳ ಪೂರ್ವಾಪರ ಮಾಹಿತಿ ಪಡೆದು ಜನ ಬಯಸುವವರಿಗೆ ಟಿಕೆಟ್ ಕೊಡಲಿದೆ’ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ತಮ್ಮ ಮಗನಿಗೆ ವಿಧಾನ ಪರಿಷತ್ತಿನ ಟಿಕೆಟ್‌ ಕೊಡದ ಕಾರಣ ಮಾಜಿ ಸಚಿವ ವೈಜಿನಾಥ ಪಾಟೀಲರಿಗೆ ಬೇಸರವಾಗಿದೆ. ಬೆಂಗಳೂರಲ್ಲಿ ಅವರು ಆಡಿರುವ ಮಾತಿಗೆ ಪ್ರತಿಕ್ರಿಯೆ ನೀಡಲಾರೆ. ಈಗಾಗಲೇ ಅವರು ಕ್ಷಮೆಯಾಚಿಸಿದ್ದಾರೆ’ ಎಂದರು.

‘ಸಂವಿಧಾನ ಬದಲಿಸಲು ಸಾಧ್ಯವಿಲ್ಲ’: ‘ದೇಶದ ಜನತೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರೆಗೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ’ ಎಂದು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಸಂವಿಧಾನ ಬದಲಾವಣೆ ಹಾಗೂ ತಿದ್ದುಪಡಿ ಎರಡೂ ಬೇರೆ ಬೇರೆ ವಿಚಾರ. ಆದರೆ ಆರ್‌ಎಸ್‌ಎಸ್‌ನವರು ಹಾಗೂ ಕೇಂದ್ರ ಸಚಿವರು ಸಂವಿಧಾನ ಬದಲಿಸುವ ಹೇಳಿಕೆ ಕೊಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಹೇಳಿಕೆ ಸರಿಯಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry