ಮೊಡವೆಗೆ ಔಷಧ ಸೇವಿಸಿದ ವಿದ್ಯಾರ್ಥಿನಿ ಸಾವು

7
ಅಲೋಪತಿ ಚಿಕಿತ್ಸೆ ನೀಡಿದ್ದ ಆಯುರ್ವೇದ ವೈದ್ಯ:

ಮೊಡವೆಗೆ ಔಷಧ ಸೇವಿಸಿದ ವಿದ್ಯಾರ್ಥಿನಿ ಸಾವು

Published:
Updated:

ಉಡುಪಿ: ಮೊಡವೆ ನಿವಾರಣೆಗಾಗಿ ಆಯುರ್ವೇದ ವೈದ್ಯ ನೀಡಿದ ಔಷಧ ಸೇವಿಸಿದ ಪರಿಣಾಮ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಮಣಿಪಾಲದಲ್ಲಿ ಮೃತಪಟ್ಟಿದ್ದಾರೆ.

ಉಡುಪಿಯ ಕಾಲೇಜಿನಲ್ಲಿ ಪ್ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಮುಖದ ಮೇಲೆ ತೀವ್ರ ಮೊಡವೆಗಳಾಗಿದ್ದವು. ಅದಕ್ಕಾಗಿ ಅವರು ಸ್ಥಳೀಯ ಆಯುರ್ವೇದ ವೈದ್ಯರನ್ನು ಶನಿವಾರ ಸಂಪರ್ಕಿಸಿದ್ದರು. ಆಯುರ್ವೇದ ಔಷಧ ನೀಡದ ಅವರು ಅಲೋಪತಿ ಔಷಧ ನೀಡಿದ್ದರು ಎಂದು ಹೇಳಲಾಗಿದೆ.

ಔಷಧ ಓವರ್‌ ಡೋಸ್ ಆಗಿ ಅಡ್ಡ ಪರಿಣಾಮ ಬೀರಿದ ಕಾರಣ ಅಸ್ವಸ್ಥಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯುವತಿಯ ಕುಟುಂಬದವರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry