ಕ್ವಾರ್ಟರ್‌ಫೈನಲ್‌ಗೆ ಡೆಲ್ ಪೊಟ್ರೊ

7

ಕ್ವಾರ್ಟರ್‌ಫೈನಲ್‌ಗೆ ಡೆಲ್ ಪೊಟ್ರೊ

Published:
Updated:
ಕ್ವಾರ್ಟರ್‌ಫೈನಲ್‌ಗೆ ಡೆಲ್ ಪೊಟ್ರೊ

ಆಕ್ಲಂಡ್‌:  ಅರ್ಜೆಂಟೀನಾದ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಆಕ್ಲಂಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಡೆಲ್‌ ಪೊಟ್ರೊ 6–2, 6–4ರಲ್ಲಿ ಡೆನಿಸ್‌ ಶಪವಲೊವ್‌ ಅವರನ್ನು ಮಣಿಸಿದರು.

2009ರ ಅಮೆರಿಕ ಓಪನ್‌ನಲ್ಲಿ ಚಾಂಪಿಯನ್ ಆಗಿರುವ ಡೆಲ್ ಪೊಟ್ರೊ ಎಂಟು ಏಸ್‌ಗಳನ್ನು ಸಿಡಿಸುವ ಮೂಲಕ 18 ವರ್ಷದ ಕೆನಡಾದ ಆಟಗಾರನ ಮೇಲೆ ಒತ್ತಡ ಹೇರಿದರು. ಎರಡನೇ ಶ್ರೇಯಾಂಕದ ಆಟಗಾರ ಮುಂದಿನ ಸುತ್ತಿನಲ್ಲಿ ರಷ್ಯಾದ ಕರೆನ್ ಕಚನೊವ್ ವಿರುದ್ಧ ಆಡಲಿದ್ದಾರೆ. ಕರೆನ್‌ 6–2, 7–6ರಲ್ಲಿ ಆರನೇ ಶ್ರೇಯಾಂಕದ ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ಎದುರು ಗೆದ್ದಿದ್ದಾರೆ.

ಇನ್ನೊಂದು ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಜಾಕ್‌ ಸಾಕ್‌ 3–6, 3–6ರಲ್ಲಿ ಜರ್ಮನಿಯ ಪೀಟರ್‌ ಗೊಜೊವಿಚ್‌ ಎದುರು ಸೋತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry