ಟೆನಿಸ್: ಜೊಕೊವಿಚ್‌ಗೆ ಜಯ

7

ಟೆನಿಸ್: ಜೊಕೊವಿಚ್‌ಗೆ ಜಯ

Published:
Updated:
ಟೆನಿಸ್: ಜೊಕೊವಿಚ್‌ಗೆ ಜಯ

ಮೆಲ್ಬರ್ನ್‌ (ಎಎಫ್‌ಪಿ): ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್ ಹೊಸ ವರ್ಷದಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

ಕಿಯಾಂಗ್ ಕ್ಲಾಸಿಕ್‌ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ನೊವಾಕ್‌ 6–1, 6–4ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಹೊಂದಿರುವ ಡಾಮಿನಿಕ್‌ ಥೀಮ್‌ ಅವರನ್ನು ಮಣಿಸಿದರು.

ಮೊಣಕೈ ಗಾಯದ ಕಾರಣ ಜೊಕೊವಿಚ್‌ ಹಿಂದಿನ ಆರು ತಿಂಗಳ ಅವಧಿಯಲ್ಲಿ ಯಾವುದೇ ಟೂರ್ನಿಗಳಲ್ಲಿ ಆಡಿರಲಿಲ್ಲ. ಇದರಿಂದ ಚೇತರಿಸಿಕೊಂಡ ನಂತರ ಆಡಿದ ಮೊದಲ ಪಂದ್ಯ ಇದು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 14ನೇ ಸ್ಥಾನಕ್ಕೆ ಕುಸಿದಿರುವ ಜೊಕೊವಿಚ್‌, ಮೊದಲ ಸೆಟ್‌ನಲ್ಲಿ ಮಿಂಚಿನ ಆಟ ವಾಡಿದರು. ಅವರ ರ‍್ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಶರವೇಗದ ಸರ್ವ್‌ ಗಳನ್ನು ಹಿಂತಿರುಗಿಸಲು ಡಾಮಿನಿಕ್‌ ಪ್ರಯಾಸ ಪಟ್ಟರು.

ಎರಡನೇ ಸೆಟ್‌ನಲ್ಲೂ ಜೊಕೊವಿಚ್‌ ಆಟ ರಂಗೇರಿತು. ಅಮೋಘ ಕ್ರಾಸ್‌ ಕೋರ್ಟ್‌ ಹೊಡೆತಗಳನ್ನು ಬಾರಿಸಿದ ಅವರು ಚುರುಕಿನ ಡ್ರಾಪ್‌ಗಳ ಮೂಲಕ ಗೇಮ್‌ ಗೆದ್ದು ಅಭಿಮಾನಿಗಳನ್ನು ರಂಜಿಸಿದರು.

‘ಗಾಯದಿಂದ ಗುಣಮುಖನಾದ ನಂತರ ಆಡಿದ ಮೊದಲ ಪಂದ್ಯದಲ್ಲೇ ಗೆದ್ದಿದ್ದು ಖುಷಿ ನೀಡಿದೆ. ಈ ಜಯದಿಂದ ಮನೋಬಲ ಹೆಚ್ಚಿದ್ದು, ಆಸ್ಟ್ರೇಲಿಯಾ ಓಪನ್‌ನಲ್ಲಿ ವಿಶ್ವಾಸದಿಂದ ಆಡಲು ಸಹಾಯಕವಾಗಿದೆ’ ಎಂದು ನೊವಾಕ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry