‘ಅಡಿಗಾಸ್‌ ಯಾತ್ರಾ’ದಿಂದ ವಿಶೇಷ ಪ್ರವಾಸ ಪ್ಯಾಕೇಜ್‌

7

‘ಅಡಿಗಾಸ್‌ ಯಾತ್ರಾ’ದಿಂದ ವಿಶೇಷ ಪ್ರವಾಸ ಪ್ಯಾಕೇಜ್‌

Published:
Updated:

ಬೆಂಗಳೂರು: ಅಡಿಗಾಸ್‌ ಯಾತ್ರಾ ಸಂಸ್ಥೆ ತನ್ನ 24ನೇ ವರ್ಷಾಚರಣೆ ಪ್ರಯುಕ್ತ ‘ವಿಶೇಷ ಪ್ರವಾಸ ಪ್ಯಾಕೇಜ್‌’ ಸೌಲಭ್ಯವನ್ನು ಬುಧವಾರ ಘೋಷಿಸಿದೆ.

ಸಂಸ್ಥೆಯ ಮಾಲೀಕ ಕೆ. ನಾಗರಾಜ ಅಡಿಗ, ‘ನೇಪಾಳ ಮತ್ತು ಉತ್ತರ ಭಾರತ, ಭೂತಾನ ಮತ್ತು ಪೂರ್ವ ಭಾರತ, ಪಶ್ಚಿಮ ಮತ್ತು ಮಧ್ಯ ಭಾರತ, ದಕ್ಷಿಣ ಭಾರತ ಪ್ರವಾಸಗಳನ್ನು ಆಯೋಜಿಸಿದ್ದೇವೆ. ವಿದೇಶಿ ಪ್ರವಾಸದ ಪ್ಯಾಕೇಜ್‌ಗಳೂ ಲಭ್ಯ ಇವೆ. ಎರಡು ವಿಭಾಗಗಳಲ್ಲಿ ಪ್ರವಾಸಗಳನ್ನು ಆಯೋಜಿಸಲಾಗಿದೆ. ಐಷಾರಾಮಿ ಪ್ರವಾಸ ಹಾಗೂ ಗ್ರಾಹಕರ ಬೇಡಿಕೆಯ ಪ್ರವಾಸಿ ಪ್ಯಾಕೇಜ್‌ಗಳು ಇವೆ’ ಎಂದು ಮಾಹಿತಿ ನೀಡಿದರು.

ಪ್ರವಾಸಗಳ ಕುರಿತ ಕೈಪಿಡಿ ಬಿಡುಗಡೆಗೊಳಿಸಿದ ಸಿಂಡಿಕೇಟ್‌ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ಕೆ. ಬಸವರಾಜ್‌, ‘ಅಡಿಗಾಸ್‌ ಯಾತ್ರಾ ಸಂಸ್ಥೆ ಮೂಲಕವೇ ಅನೇಕ ತಾಣಗಳಿಗೆ ಪ್ರವಾಸ ಮಾಡಿದ್ದೇನೆ. ಕಾಳಜಿ, ಶಿಸ್ತು, ಊಟೋಪಚಾರ, ವಸತಿ ಸೌಲಭ್ಯ ಎಲ್ಲವೂ ಗುಣಮಟ್ಟದಿಂದ ಕೂಡಿದೆ’ ಎಂದು ಹೇಳಿದರು.

ಪ್ರವಾಸದ ವಿವರ, ಹೊರಡುವ ದಿನಾಂಕಗಳ ಬಗ್ಗೆ ಕೈಪಿಡಿಯಲ್ಲಿ ವಿಸ್ತೃತ ಮಾಹಿತಿ ಇದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ www.adigasyatra.com ನೋಡಬಹುದು. ಮೊ. 9611600810ಗೆ ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry