ಇಸ್ರೊ ಅಧ್ಯಕ್ಷರಾಗಿ ಡಾ.ಕೆ. ಶಿವನ್

7

ಇಸ್ರೊ ಅಧ್ಯಕ್ಷರಾಗಿ ಡಾ.ಕೆ. ಶಿವನ್

Published:
Updated:
ಇಸ್ರೊ ಅಧ್ಯಕ್ಷರಾಗಿ ಡಾ.ಕೆ. ಶಿವನ್

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೊ) ಹೊಸ ಅಧ್ಯಕ್ಷರಾಗಿ ವಿಜ್ಞಾನಿ ಡಾ.ಕೆ. ಶಿವನ್‌ ನೇಮಕಗೊಂಡಿದ್ದಾರೆ.

ಇಸ್ರೊದಿಂದ ಐತಿಹಾಸಿಕ 100ನೇ ಉಪಗ್ರಹ ಉಡಾವಣೆಗೆ ಎರಡು ದಿನ ಮುಂಚಿತವಾಗಿ (12ರಂದು ಉಡಾವಣೆ ನಡೆಯಲಿದೆ) ಈ ನೇಮಕಾತಿ ನಡೆದಿದೆ.

ತಿರುವನಂತಪುರದಲ್ಲಿರುವ ‘ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ  ಡಾ. ಶಿವನ್‌ ಅವರು ಎ.ಎಸ್‌.ಕಿರಣ್‌ ಕುಮಾರ್‌ ಅವರ ಜಾಗಕ್ಕೆ ನೇಮಕವಾಗಿದ್ದಾರೆ. ಇವರು ಮುಂಬರುವ ಮೂರು ವರ್ಷಗಳ ಅವಧಿಗೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಬಾಹ್ಯಾಕಾಶ ಆಯೋಗದ ಅಧ್ಯಕ್ಷರೂ ಆಗಿರುತ್ತಾರೆ’ ಎಂದು ಸಿಬ್ಬಂದಿ ಸಚಿವಾಲಯ ಹೇಳಿದೆ.

ಶಿವನ್‌ ಅವರು ಏರೋನಾಟಿಕಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ’ಮದ್ರಾಸ್‌ ತಾಂತ್ರಿಕ ಸಂಸ್ಥೆ’ಯಿಂದ ಪದವಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂಬೈನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಪಿಎಚ್‌.ಡಿ ಮುಗಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry