24ರಂದು ಮೇವು ಹಗರಣದ ಮತ್ತೊಂದು ತೀರ್ಪು

7

24ರಂದು ಮೇವು ಹಗರಣದ ಮತ್ತೊಂದು ತೀರ್ಪು

Published:
Updated:

ಪಟ್ನಾ: ಬಹು–ಕೋಟಿ ಮೇವು ಹಗರಣದ ಮತ್ತೊಂದು ಪ್ರಕರಣದ (68ಎ/96) ತೀರ್ಪನ್ನು ಇದೇ 24ರಂದು ಪ್ರಕಟಿಸಲು ರಾಂಚಿಯ ಸಿಬಿಐನ ವಿಶೇಷ ನ್ಯಾಯಾಲಯ ಬುಧವಾರ ನಿರ್ಧರಿಸಿದೆ.

ಚಾಯೀಬಾಸಾ ಖಜಾನೆಯಿಂದ ₹37.6 ಕೋಟಿ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣ ಇದಾಗಿದೆ.

ದೇವಗಡ ಖಜಾನೆಯಿಂದ ಅಕ್ರಮವಾಗಿ ಹಣ ‍ಪಡೆದ ಪ್ರಕರಣದಲ್ಲಿ ತಮಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಜಾರ್ಖಂಡ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಸಿದ್ಧತೆ ನಡೆಸುತ್ತಿರುವಾಗಲೇ, ಮತ್ತೊಂದು ಪ್ರಕರಣದ ತೀರ್ಪು ಹೊರ ಬೀಳುತ್ತಿದೆ.

ಮೇವು ಹಗರಣದ ಐದು ಪ್ರಕರಣಗಳ ಪೈಕಿ ಮೂರಕ್ಕೆ ಸಂಬಂಧಿಸಿದಂತೆ ಬುಧವಾರ ಲಾಲು ಪ್ರಸಾದ್‌ ಅವರನ್ನು ರಾಂಚಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry