ಕಾವೇರಿ ನೀರು ಬಾಕಿ ನೆನಪಿಸಿದ ಪಳನಿಸ್ವಾಮಿ

7
ಕಾವೇರಿ: ಸದನಕ್ಕೆ ಮಾಹಿತಿ ನೀಡಿದ ತಮಿಳುನಾಡು ಸಿ.ಎಂ

ಕಾವೇರಿ ನೀರು ಬಾಕಿ ನೆನಪಿಸಿದ ಪಳನಿಸ್ವಾಮಿ

Published:
Updated:
ಕಾವೇರಿ ನೀರು ಬಾಕಿ ನೆನಪಿಸಿದ ಪಳನಿಸ್ವಾಮಿ

ಚೆನ್ನೈ (ಪಿಟಿಐ): ‘ತಮಿಳುನಾಡಿಗೆ ಕರ್ನಾಟಕ ಇನ್ನೂ 81 ಟಿಎಂಸಿ ಅಡಿ ಕಾವೇರಿ ನೀರು ಬಿಡುವುದು ಬಾಕಿ ಇದೆ. ನಮ್ಮ ಪಾಲಿನ ನೀರು ನೀಡು

ವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಬುಧವಾರ

ಹೇಳಿದ್ದಾರೆ.

ಕಾವೇರಿ ನ್ಯಾಯಮಂಡಳಿ 2007ರಲ್ಲಿ ನೀಡಿದ ತೀರ್ಪಿನ ಅನ್ವಯ ಕರ್ನಾಟಕವು ಪ್ರತಿ ವರ್ಷ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ನೀಡಬೇಕು. ಆದರೆ, ಕರ್ನಾಟಕ ಇಲ್ಲಿಯವರೆಗೆ 111 ಟಿಎಂಸಿ ಅಡಿ ನೀರನ್ನು ಮಾತ್ರ ಬಿಟ್ಟಿದೆ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಷಿಗೆ ನೀರಿನ ಅಗತ್ಯ ಕುರಿತು ಸದನದ ಗಮನ ಸೆಳೆದ ಡಿಎಂಕೆ ಶಾಸಕ ದೊರೈ ಚಂದ್ರಶೇಖರ್‌, ಈ ನಿಟ್ಟಿನಲ್ಲಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

‘ನ್ಯಾಯಮಂಡಳಿ ಆದೇಶದಂತೆ ಕರ್ನಾಟಕ ನೀರು ಬಿಡಲು ಇನ್ನೂ ಮೇ 2018ರವರೆಗೆ ಸಮಯವಿದೆ. ರಾಜ್ಯಕ್ಕೆ ಸಿಗಬೇಕಾಗದ ಪಾಲನ್ನು ಪಡೆಯಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

‘ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೇಂದ್ರವನ್ನು ಕೋರಲಾಗಿದೆ. ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ನಲ್ಲೂ ಕಾನೂನು ಹೋರಾಟ ನಡೆಸಿ

ದ್ದೇವೆ’ ಎಂದು ತಿಳಿಸಿದರು.

ತಮಿಳುನಾಡು ಮತ್ತು ಕರ್ನಾಟಕದ ನಡುವಣ ದಶಕಗಳಷ್ಟು ಹಳೆಯದಾದ ಕಾವೇರಿ ನದಿ ನೀರು ಹಂಚಿಕೆ ಪ್ರಕರಣದ ತೀರ್ಪನ್ನು ತಿಂಗಳ ಒಳಗಾಗಿ ನೀಡುವುದಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry