ರಾಷ್ಟ್ರೀಯ ವಿಜ್ಞಾನ ಉತ್ಸವ

7

ರಾಷ್ಟ್ರೀಯ ವಿಜ್ಞಾನ ಉತ್ಸವ

Published:
Updated:
ರಾಷ್ಟ್ರೀಯ ವಿಜ್ಞಾನ ಉತ್ಸವ

ಬೆಂಗಳೂರು: ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಸೈನ್ಸ್ ಸೊಸೈಟಿ ಆಫ್ ಇಂಡಿಯಾ ಮತ್ತು ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ವರ್ತೂರಿನ ವಾಗ್ದೇವಿ ವಿಲಾಸ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ಮೇಳ ಆಯೋಜಿಸಲಾಗಿತ್ತು.

9 - 12ನೇ ತರಗತಿಯವರಿಗೆ ವಲಯ ಮಟ್ಟದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಇಪ್ಪತ್ತು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೆಂಗಿನ ನಾರಿನಿಂದ ತಯಾರಾದ ಗೃಹೋಪಯೋಗಿ ವಸ್ತುಗಳ ಮಾದರಿ, ಹಲಸಿನ ಹಣ್ಣಿನಿಂದ ಬೆಲ್ಲ ತಯಾರಿಸುವುದು, ಬಾಹ್ಯಾಕಾಶ ಸಂಶೋಧನೆಯ ಮಾದರಿ, ಚೆಂಡು ಹೂವಿನಿಂದ ತಯಾರಿಸಿದ ರಸದಿಂದ ಕಲುಷಿತ ಕೆರೆಗಳಿಂದ ಉತ್ಪತ್ತಿಯಾಗುವ ನೊರೆಯನ್ನು ಕಡಿಮೆಗೊಳಿಸುವ ಮಾದರಿ ಸೇರಿದಂತೆ  ಹಲವಾರು ವೈಜ್ಞಾನಿಕ ಮಾದರಿಗಳು  ಗಮನ ಸೆಳೆದವು.

ಭಾರತೀಯ ವಿಜ್ಞಾನ ಸೊಸೈಟಿಯ ಅಧ್ಯಕ್ಷ ನಾರಾಯಣ ಅಯ್ಯರ್, ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ಹರೀಶ್ ದ ಮಾತನಾಡಿದರು. ವಿಶ್ವೇಶ್ವರಯ್ಯ ಔದ್ಯೋಗಿಕ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ಮಾಜಿ ನಿರ್ದೇಶಕ ಕೆ.ಜಿ. ಕುಮಾರ್ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry