ಮುಂಬೈ ಕಮಲಾ ಮಿಲ್ಸ್‌ ಅಗ್ನಿ ದುರಂತ: ಪಬ್‌ ಮಾಲೀಕರ ಬಂಧನ

7

ಮುಂಬೈ ಕಮಲಾ ಮಿಲ್ಸ್‌ ಅಗ್ನಿ ದುರಂತ: ಪಬ್‌ ಮಾಲೀಕರ ಬಂಧನ

Published:
Updated:
ಮುಂಬೈ ಕಮಲಾ ಮಿಲ್ಸ್‌ ಅಗ್ನಿ ದುರಂತ: ಪಬ್‌ ಮಾಲೀಕರ ಬಂಧನ

ಮುಂಬೈ: ನಗರದ ಕಮಲಾ ಮಿಲ್ಸ್‌ ಕಾಂಪೌಂಡ್‌ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಒನ್‌ ಅಬೋವ್‌ ಮಾಲೀಕರು(ಸಂಘವಿ ಸಹೋದರರು) ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಡಿ. 29ರ ರಾತ್ರಿ ಒನ್‌ ಅಬೋವ್‌ ಪಬ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದ ವೇಳೆ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ಘಟನೆಯ ಬಳಿಕ ಪಬ್‌ ಮಾಲೀಕರಾದ ಜಿಗರ್ ಸಂಘವಿ, ಕೃಪೇಶ್ ಸಂಘವಿ ತಲೆಮರೆಸಿಕೊಂಡಿದ್ದರು.

ಪ್ರಕರಣ ಕುರಿತು ಇತ್ತೀಚಿಗೆ ಕಾರ್ಯಾಚರಣೆ ಆರಂಭಿಸಿದ್ದ ಮುಂಬೈ ಪೊಲೀಸರು ಬುಧವಾರ ನಗರದ ಬಾಂದ್ರಾದ ಹೋಟೆಲ್‌ನಲ್ಲಿ ಸಂಘವಿ ಸಹೋದರರು ಸೇರಿದಂತೆ ವಿಶಾಲ್‌ ಕರಿಯಾ ಎಂಬುವವರನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಪಬ್‌ನ ಮತ್ತೊಬ್ಬ ಸಹ ಮಾಲೀಕ ಮಂಕರ್‌ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ...

ಮುಂಬೈ ಅಗ್ನಿ ಅವಘಡ: ಐವರು ಬಿಎಂಸಿ ಅಧಿಕಾರಿಗಳ ಅಮಾನತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry