ಹೆಲ್ಮೆಟ್‌ ಧರಿಸಿ ಜೀವ ಉಳಿಸಿಕೊಳ್ಳಿ

7

ಹೆಲ್ಮೆಟ್‌ ಧರಿಸಿ ಜೀವ ಉಳಿಸಿಕೊಳ್ಳಿ

Published:
Updated:

ಗುಡಿಬಂಡೆ: 'ದ್ವಿಚಕ್ರ ವಾಹನ ಸವಾರರು ಗುಣಮಟ್ಟದ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಬೇಕು ಎಂದು ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಧೀಶ ಎಂ.ವಿನೋದ್ ಕುಮಾರ್ ತಿಳಿಸಿದರು.

'ಹೆಲ್ಮೆಟ್ ಕುರಿತು ಕಾನೂನು ಅರಿವು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ದ್ವಿಚಕ್ರ ವಾಹನ ಸವಾರರ ಜೀವ ಅವರ ಕೈಯಲ್ಲಿಯೇ ಇದೆ. ಅಪಘಾತ ಸಂಭವಿಸಿದಾಗ ಹೆಲ್ಮೆಟ್ ಇದ್ದರೆ ಜೀವಾಪಾಯ ತಪ್ಪಿಸಬಹುದು. ಈ ಕುರಿತು ನ್ಯಾಯಾಲಯವೂ ಸೂಚನೆ ನೀಡಿದೆ ಎಂದರು.

ಸಹಾಯಕ ಸರ್ಕಾರಿ ವಕೀಲ ಸತೀಶ್ ಮಾತನಾಡಿ, 'ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಸಿ. ಅಶ್ವತ್ಥರೆಡ್ಡಿ, ಉಪಾಧ್ಯಕ್ಷ ಎಸ್.ವಿ. ನಂದೀಶ್ವರರೆಡ್ಡಿ, ಕಾರ್ಯದರ್ಶಿ ಎ. ಗಂಗಾಧರಪ್ಪ, ವಕೀಲರಾದ ನಾರಾ ಯಣಸ್ವಾಮಿ, ಪಿ.ಶಿವಪ್ಪ, ಜಿ.ಎಂ. ಅನಿಲ್ ಕುಮಾರ್, ಗೋವಿಂದಪ್ಪ, ಗಂಗರಾಜು, ಆಡಳಿತ ಸಹಾಯಕ ಎನ್.ಸುರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry