ಮಂಗಳೂರು: 'ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌’ ಆರಂಭ

7

ಮಂಗಳೂರು: 'ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌’ ಆರಂಭ

Published:
Updated:
ಮಂಗಳೂರು: 'ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌’ ಆರಂಭ

ಮಂಗಳೂರು: ದೀಕ್ಷಾ ಸಹಯೋಗದಲ್ಲಿ 'ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌’ ನಗರದ ಕೆನರಾ ಕಾಲೇಜಿನ ಸುಧೀಂದ್ರ ಸಭಾಂಗಣದಲ್ಲಿ ಗುರುವಾರ ಆರಂಭವಾಯಿತು.

ವಿವಿಧ ಶಾಲಾ ವಿದ್ಯಾರ್ಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 35 ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 100ಕ್ಕೂ ಹೆಚ್ಚು ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದಾರೆ.

ಕ್ವಿಜ್ ಮಾಸ್ಟರ್ ರಾಘವ್ ಚಕ್ರವರ್ತಿ ಅವರು ಪ್ರಾಥಮಿಕ ಸುತ್ತಿನ ಸ್ಪರ್ಧೆಯನ್ನು ಆರಂಭಿಸಿದರು.

ವಿದ್ಯಾರ್ಥಿಗಳು ದೀಪ ಬೆಳಗಿಸಿದರು.

ಅಂತಿಮ ಸುತ್ತಿಗೆ ಆರು ತಂಡಗಳ ಆಯ್ಕೆ

ಮಂಗಳೂರು ವಲಯದ ಸ್ಪರ್ಧೆಯ ಅಂತಿಮ ಸುತ್ತಿಗೆ ಆರು ತಂಡಗಳು ಆಯ್ಕೆಯಾಗಿವೆ.

ಉಜಿರೆಯ ಎಸ್ ಡಿಎಂ ಶಾಲೆಯ ಕೃಷ್ಣ ತೇಜಸ್ವಿ ಮತ್ತು ಗಿರೀಶ್ ಕೃಷ್ಣ, ಉಡುಪಿಯ ವಿದ್ಯೋದಯ ಶಾಲೆಯ ಧಿರೇನ್‌ ಮತ್ತು ಚಂದನ್, ಪುತ್ತೂರಿನ ವಿವೇಕಾನಂದ ಶಾಲೆಯ ರಾಕೇಶ್ ಮತ್ತು ಶಶಾಂಕ, ಮೂಡುಬಿದಿರೆಯ ರೋಟರಿ ಶಾಲೆಯ ಧೀರಜ್ ಮತ್ತು ಚಿನ್ಮಯ, ಕುಂದಾಪುರದ ಸಿದ್ಧಿವಿನಾಯಕ ಶಾಲೆಯ ಅಕ್ಷಿತ್ ಮತ್ತು ಶ್ರೀರಾಮ್, ಮಂಗಳೂರಿನ ಶಾರದಾ ವಿದ್ಯಾಲಯದ ಪ್ರದ್ಯಮ್ನ ಉಪಾಧ್ಯೆ ಮತ್ತು ಪನ್ನಗ ಭಟ್ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry