ಉತ್ತಮ ಪ್ರಜೆಯಾಗಲು ಎನ್‌ಎಸ್‌ಎಸ್‌ ಅಗತ್ಯ

7

ಉತ್ತಮ ಪ್ರಜೆಯಾಗಲು ಎನ್‌ಎಸ್‌ಎಸ್‌ ಅಗತ್ಯ

Published:
Updated:

ಭರಮಸಾಗರ: ವಿದ್ಯಾರ್ಥಿಗಳಿಗೆ ವ್ಯಾಸಂಗ ಒಂದು ಭಾಗವಾದರೆ ಸೇವೆ ಇನ್ನೊಂದು ಭಾಗ. ಇವೆರಡನ್ನು ಮೈಗೂಡಿಸಿಕೊಂಡರೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಪ್ರಾಂಶುಪಾಲ ಪಿ.ಬಿ.ವಿಜಯಕುಮಾರ್ ತಿಳಿಸಿದರು.

ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಎಸ್‌ಜೆಎಂ ವಿದ್ಯಾಪೀಠ ಚಿತ್ರದುರ್ಗ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 7ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2017-18 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಯೋಜನೆ ಶಿಬಿರಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡು ರಾಷ್ಟ್ರ ಸೇವೆ, ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಾಗ ವಿದ್ಯೆ ತನ್ನದಾಗಿಸಿಕೊಳ್ಳಬಹುದು ಎಂದರು.

ಉಪನ್ಯಾಸಕ ಹೆಚ್.ಶಿವಮೂರ್ತಪ್ಪ ಹಾಗೂ ಪರಿಸರ ಅಧಿಕಾರಿ ಬಿ.ಎನ್.ಮುರಳೀಧರ್ ಪರಿಸರ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಸಂತೋಷ್ ಮಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ವಿ.ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು.  ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಈ.ಚಿತ್ರಶೇಖರ್, ಕಾರ್ಯನಿರ್ವಹಣಾ ಅಧಿಕಾರಿ ಎಂ.ಜೆ.ದೊರೆಸ್ವಾಮಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಎನ್. ಕಲ್ಲೇಶ್, ಮುಖಂಡರಾದ ಬಿ.ಕೆ.ಸಕ್ಲೀನ್ ಪಾಷಾ, ಹಾಗೂ ಉಪನ್ಯಾಸಕ ವರ್ಗ, ಕಚೇರಿ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry