ಹುಚ್ಚುನಾಯಿ ದಾಳಿ: ಇಬ್ಬರಿಗೆ ಗಾಯ

5

ಹುಚ್ಚುನಾಯಿ ದಾಳಿ: ಇಬ್ಬರಿಗೆ ಗಾಯ

Published:
Updated:
ಹುಚ್ಚುನಾಯಿ ದಾಳಿ: ಇಬ್ಬರಿಗೆ ಗಾಯ

ಮಲೇಬೆನ್ನೂರು: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಮಂಗಳವಾರ ಹುಚ್ಚು ನಾಯಿ ದಾಳಿ ಮಾಡಿ ಒಬ್ಬ ಬಾಲಕಿ ಹಾಗೂ ಒಬ್ಬ ಗೃಹಣಿಯನ್ನು ಕಡಿದು ಗಾಯಗೊಳಿಸಿದ ಘಟನೆಯಿಂದ ನಾಗರಿಕರು ಆತಂಕಕ್ಕೆ ಒಳಗಾದ ಘಟನೆ ಸಂಭವಿಸಿದೆ.

ಅಂಗನವಾಡಿ ಕೇಂದ್ರಕ್ಕೆ ಹೋಗುತ್ತಿದ್ದ ಬಾಲಕಿ ಉಷಾ ಎದೆ ಭಾಗ ಹಾಗೂ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಸಂಕೊಳ್ಳಿ ಲಲಿತಾ ಪುಟ್ಟಣ್ಣ ಕಾಲಿನ ಭಾಗಕ್ಕೆ ನಾಯಿ ಕಚ್ಚಿದೆ.

ಗಾಯಗೊಂಡ ಇಬ್ಬರಿಗೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದಕ್ಕೂ ಮುನ್ನ ರಸ್ತೆಯಲ್ಲಿ ಓಡಾಡುತ್ತಿದ್ದವರ ಕೈಲಿದ್ದ ವಸ್ತುಗಳು ಹಾಗೂ ಕವರನ್ನು ನಾಯಿ ಹರಿದು ಹಾಕಿದೆ. ಬಡಾವಣೆ ನಾಗರಿಕರು ಹುಚ್ಚು ನಾಯಿ ಹಿಡಿಸಿ ಪಟ್ಟಣದಿಂದ ಹೊರಗೆ ಸಾಗಿಸುವಂತೆ ಪುರಸಭೆಗೆ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry