ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳನ್ನು ಸಿದ್ದರಾಮಯ್ಯ ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುವೆ: ಸಿಎಂಗೆ ವಿ.ಸೋಮಣ್ಣ ಪಂಥಾಹ್ವಾನ

7

ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳನ್ನು ಸಿದ್ದರಾಮಯ್ಯ ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುವೆ: ಸಿಎಂಗೆ ವಿ.ಸೋಮಣ್ಣ ಪಂಥಾಹ್ವಾನ

Published:
Updated:
ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳನ್ನು ಸಿದ್ದರಾಮಯ್ಯ ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುವೆ: ಸಿಎಂಗೆ ವಿ.ಸೋಮಣ್ಣ ಪಂಥಾಹ್ವಾನ

ಹಾಸನ: ‘ಈ ಬಾರಿ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ ತೋರಿಸಲಿ. ಅವರು ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಇದು ಸಿದ್ದರಾಮಯ್ಯಗೆ ನನ್ನ ಸವಾಲು’ ಎಂದು ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಹೇಳಿದರು.

‘ದೇವೇಗೌಡರ ಬಗ್ಗೆಯಾಗಲಿ ಯಾರ ಬಗ್ಗೆಯಾಗಲಿ ಹಗುರವಾಗಿ ಮಾತಾಡಬಾರದು. ದೇವೇಗೌಡರ ಬಗ್ಗೆ ನಾವು ಹಗುರವಾಗಿ ಮಾತಾಡಲ್ಲ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜನರ ಮುಂದೆ ಸಿದ್ದರಾಮಯ್ಯರ ಯಾವ ಭಾಗ್ಯ ನಡೆಯಲ್ಲ. ಚಾಮರಾಜನಗರದಲ್ಲಿ ಸರ್ಕಾರದ ಸಾಧನೆ ಬಗ್ಗೆ ಮಾತಾಡಿ ಅಂತ ಸಾಧನ ಸಮಾವೇಶದಲ್ಲಿ ಹೇಳಿದವರಿಗೆ ಸಿಎಂ ಅರೆಸ್ಟ್ ಮಾಡಿಸಿದ್ರು’ ಎಂದು ಆಪಾದಿಸಿದರು.

ದೇವೇಗೌಡರು ದೊಡ್ಡ ತಪ್ಪು ಮಾಡಿದರು

‘ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್‌ನ ವರಷ್ಠರಾದ ಎಚ್‌.ಡಿ. ದೇವೇಗೌಡ ಅವರು ದೊಡ್ಡ ತಪ್ಪು ಮಾಡಿದರು. ಅದರಿಂದಗಿ ಸಿಎಂ ಉದ್ದಟತತನದಿಂದ ನಡೆದುಕೊಳ್ಲುತ್ತಿದ್ದಾರೆ. ಸಿಎಂ ಗೌರವ ತೋರುವ ರೀತಿ ನಡೆದುಕೊಳ್ಳಬೇಕು. ಸಿದ್ದರಾಮಯ್ಯರ ನಾಲಿಗೆ ಮತ್ತು ನಡವಳಿಕೆಯೇ ಅವರಿಗೆ ಶತ್ರುವಾಗಲಿದೆ’ ಎಂದು ಸೋಮಣ್ಣ ಸಿಎಂ ವಿರುದ್ಧ ವಾಗ್ದಾಳಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry