ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ಕೆ.ಎಚ್‌.ಪಾಟೀಲರ ಹೆಸರು: ಆಕ್ಷೇಪ

Last Updated 11 ಜನವರಿ 2018, 7:00 IST
ಅಕ್ಷರ ಗಾತ್ರ

ಗದಗ: ‘ಸಚಿವ ಎಚ್‌.ಕೆ ಪಾಟೀಲ ಅವರು, ಅಧಿಕಾರ ದುರಪಯೋಗಪಡಿಸಿಕೊಂಡು ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಇಂಡಸ್ಟ್ರೀಯಲ್ ಎಸ್ಟೇಟ್ ಹಳ್ಳದವರೆಗೆ ಸುಮಾರು 3 ಕಿ.ಮೀ ರಸ್ತೆಗೆ ಕೆ.ಎಚ್‌.ಪಾಟೀಲ ರಸ್ತೆ ಎಂದು ನಾಮಕರಣ ಮಾಡಿದ್ದು ತಪ್ಪು’ ಎಂದು ಬಿಜೆಪಿ ಮುಖಂಡ ಎಂ.ಎಂ.ಹಿರೇಮಠ ಆರೋಪಿಸಿದ್ದಾರೆ.

‘ಸಹಕಾರ ಧುರೀಣ ದಿ. ಕೆ.ಎಚ್.ಪಾಟೀಲ ಅವರ ಬಗ್ಗೆ ಗೌರವ ಇದೆ. ಈಗಾಗಲೇ ಅವರ ಹೆಸರನ್ನು ಅನೇಕ ಸಂಸ್ಥೆಗಳಿಗೆ ನಾಮಕರಣ ಮಾಡಲಾಗಿದೆ. ಈಗ ಮತ್ತೆ ಈ ರಸ್ತೆಗೆ ಅವರ ಹೆಸರನ್ನು ಇಟ್ಟಿರುವುದು ಸರಿಯಾದ ಕ್ರಮವಲ್ಲ. ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರನಾಯಕರ, ಪುಣ್ಯ ಪುರುಷರ ಹೆಸರನ್ನು ಈ ರಸ್ತೆಗೆ ಇಟ್ಟಿದ್ದರೆ ಹೆಚ್ಚಿನ ಶೋಭೆ ಇರುತ್ತಿತ್ತು. ಸಚಿವರು ಮುಂದೊಂದು ದಿನ ಗದಗ ನಗರದ ಹೆಸರನ್ನೂ ಬದಲಾಯಿಸಿದರೂ ಅಚ್ಚರಿ ಪಡೆಬೇಕಾಗಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT