‘ಕ್ರೀಡೆಗಳು ಆರೋಗ್ಯಕ್ಕೆ ಪೂರಕ’

7
ಗ್ರಾಮೀಣ ವಲಯದ ಕ್ರೀಡೋತ್ಸವಕ್ಕೆ ಚಾಲನೆ

‘ಕ್ರೀಡೆಗಳು ಆರೋಗ್ಯಕ್ಕೆ ಪೂರಕ’

Published:
Updated:

ಶಿರಹಟ್ಟಿ: ‘ಕ್ರೀಡೆಗಳು ಸದೃಢ ಆರೋಗ್ಯಕ್ಕೆ ಪೂರಕ. ಆರೋಗ್ಯ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ತಾಲ್ಲೂಕಿನ ಮಾಗಡಿ ಗ್ರಾಮದ ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ಗ್ರಾಮೀಣ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಕ್ರೀಡೆಗಳ ಉಳಿಸಿ, ಬೆಳೆಸಬೇಕಿದೆ. ಕ್ರೀಡೆಯಲ್ಲಿ ಸೋಲು, ಗೆಲವು ಲೆಕ್ಕಿಸದೇ ಭಾಗವಹಿಸಬೇಕು. ಯುವಕರು ಕ್ಷಣಿಕ ಸುಖಕ್ಕಾಗಿ ಕೆಟ್ಟ ಚಟಗಳಿಗೆ ದಾಸರಾಗಬಾರದು’ ಎಂದರು.

‘ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಸಮಯ ವ್ಯರ್ಥ ಮಾಡದೇ ಆಟ ಹಾಗೂ ಅಧ್ಯಯನಕ್ಕೆ ಮೀಸಲಿಡಬೇಕು. ಮೊಬೈಲ್, ಟಿ.ವಿ ಮಾಧ್ಯಮದಿಂದ ದೂರವಿರಬೇಕು’ ಎಂದರು. ಬಳಿಕ ಅವರು ಜಾನಪದ ಗೀತೆಗಳನ್ನು ಹಾಡಿ ಗಮನಸೆಳೆದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ದೇವಕ್ಕ ಲಮಾಣಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಕ್ಕ ಹಿರೇಮಠ, ಉಪಾಧ್ಯಕ್ಷ ಮಹೇಶ ಇಳಿಗೇರ, ಈರಣ್ಣ ಅಂಗಡಿ, ಶೇಖಪ್ಪ ಬಡ್ನಿ, ಫಕೀರಯ್ಯ ಗಡ್ಡದೇವರಮಠ, ಶಿವನಗೌಡ ಪಾಟೀಲ, ಪ್ರಕಾಶ ಹೋರಿ, ಲಲಿತಾ ಪಾಟೀಲ, ನಾಗರತ್ನ ನಿಡುವಳಿ, ಮಾರುತಿ ಭಜಂತ್ರಿ, ಫಕೀರೇಶ ನಡುವಿನಕೇರಿ, ಎಂ.ಎಸ್.ನಿಂಬಕ್ಕನವರ, ಎಚ್.ಎಲ್.ಬಾಲರಡ್ಡಿ, ಅಂಗಡಿ ಇದ್ದರು. ತಾಲ್ಲೂಕು ಕ್ರೀಡಾಧಿಕಾರಿ ಎಂ.ಡಿ.ತಳ್ಳಳ್ಳಿ ಸ್ವಾಗತಿಸಿದರು. ಡಿ.ಬಿ.ಅರ್ಚನಾಳ ನಿರೂಪಿಸಿದರು. ಮುಖ್ಯಶಿಕ್ಷಕಿ ಎಸ್.ಆರ್.ಹಿರೇಮಠ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry