ಉತ್ತರ ಪ್ರದೇಶದಲ್ಲಿ 10 ತಿಂಗಳಲ್ಲಿ ಎನ್‌ಕೌಂಟರ್‌ಗೆ 33 ಬಲಿ

7

ಉತ್ತರ ಪ್ರದೇಶದಲ್ಲಿ 10 ತಿಂಗಳಲ್ಲಿ ಎನ್‌ಕೌಂಟರ್‌ಗೆ 33 ಬಲಿ

Published:
Updated:
ಉತ್ತರ ಪ್ರದೇಶದಲ್ಲಿ 10 ತಿಂಗಳಲ್ಲಿ ಎನ್‌ಕೌಂಟರ್‌ಗೆ 33 ಬಲಿ

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ, 10 ತಿಂಗಳ ಅವಧಿಯಲ್ಲಿ ಒಟ್ಟಾರೆ 921 ಎನ್‌ಕೌಂಟರ್‌ಗಳು ನಡೆದಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2017ರ ಮಾರ್ಚ್‌ 20ರ ನಂತರ ನಡೆದ 29 ಎನ್‌ಕೌಂಟರ್‌ಗಳಲ್ಲಿ 30 ಮಂದಿ ಹತರಾಗಿದ್ದಾರೆ. ಮೂವರು ಪೊಲೀಸ್‌ ಸಿಬ್ಬಂದಿಯೂ ಸಾವಿಗೀಡಾಗಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರ ಸ್ವೀಕರಿಸಿದ ಆರು ತಿಂಗಳ ಅವಧಿಯಲ್ಲೇ 19 ಎನ್‌ಕೌಂಟರ್‌ಗಳು ನಡೆದಿದ್ದವು. ಈ ವಿಷಯಕ್ಕೆ ಸಂಬಂಧಿಸಿ ನವೆಂಬರ್‌ 22ರಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಸರ್ಕಾರಕ್ಕೆ ನೋಟಿಸ್ ನೀಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್ ಪ್ರಕಾರ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 29 ಎನ್‌ಕೌಂಟರ್‌ಗಳು ನಡೆದಿವೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲೇ 8 ಎನ್‌ಕೌಂಟರ್‌ಗಳು ನಡೆದಿದ್ದು, ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ 8 ಮಂದಿ ಹಾಗೂ ಒಬ್ಬ ಪೇದೆ ಬಲಿಯಾಗಿದ್ದಾರೆ.

ಈ ಮಧ್ಯೆ, ಮಾನವಹಕ್ಕು ಆಯೋಗದಿಂದ ಇನ್ನೂ ನೋಟಿಸ್ ಬಂದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ನೋಟಿಸ್‌ಗೆ ಉತ್ತರಿಸಲು ಸರ್ಕಾರಕ್ಕೆ ಆಯೋಗ 6 ತಿಂಗಳ ಕಾಲಾವಕಾಶ ನೀಡಿತ್ತು.

* ಎನ್‌ಕೌಂಟರ್‌ ಸಂಖ್ಯೆ – 921

* ಬಂಧನಕ್ಕೊಳಗಾದವರು – 2,214

* ಗಾಯಗೊಂಡ ಆರೋಪಿಗಳು – 196

* ಗಾಯಗೊಂಡ ಪೇದೆಗಳು – 210

* ಮೃತಪಟ್ಟ ಪೇದೆಗಳು – 3

(ಇಂಡಿಯನ್‌ ಎಕ್ಸ್‌ಪ್ರೆಸ್ ಅಂಕಿಅಂಶ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry