ಮಹದಾಯಿ: ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಸಿಎಂ ಮನೆ ಬಳಿ ರೈತರ ಧರಣಿ

7

ಮಹದಾಯಿ: ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಸಿಎಂ ಮನೆ ಬಳಿ ರೈತರ ಧರಣಿ

Published:
Updated:
ಮಹದಾಯಿ: ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಸಿಎಂ ಮನೆ ಬಳಿ ರೈತರ ಧರಣಿ

ಬೆಂಗಳೂರು: ಮಹದಾಯಿ ನೀರಿಗಾಗಿ ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಮುಖ್ಯಮಂತ್ರಿ ಮನೆ ಬಳಿ ರೈತರ ಹೋರಾಟ ಆರಂಭವಾಗಿದ್ದು, ಕುಮಾರಕೃಪಾ ಆವರಣದಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಬರುವ ತನಕ ಧರಣಿ ಮುಂದುವರಿಸಲು ತೀರ್ಮಾನ ಕೈಗೊಂಡಿದ್ದಾರೆ.

ರೈತರ ಧರಣಿ ಸ್ಥಳಕ್ಕೆ ರಾಮದುರ್ಗ ಶಾಸಕ ಅಶೋಕ ಪಟ್ಟಣ್ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ‌ಜಿಲ್ಲೆ ಪ್ರವಾಸದಲ್ಲಿದ್ದಾರೆ. ರೈತರನ್ನು ಅಲ್ಲಿಗೇ ಕರೆದೊಯ್ದು ಭೇಟಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಅಶೋಕ ಪಟ್ಟಣ್ ಜೊತೆ ಮೈಸೂರಿಗೆ ಹೋಗಲು ರೈತರು ಒಪ್ಪಿದರು.

ರಾತ್ರಿ 8ರ ಸುಮಾರಿಗೆ‌ ಮುಖ್ಯಮಂತ್ರಿ ಅವರ ಮೈಸೂರು‌ ಮನೆಯಲ್ಲಿ ಮಹದಾಯಿ ಹೋರಾಟಗಾರರು ಭೇಟಿಯಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry