ಕೂಡಲಸಂಗಮಕ್ಕೆ ವಿಶೇಷ ಬಸ್

7

ಕೂಡಲಸಂಗಮಕ್ಕೆ ವಿಶೇಷ ಬಸ್

Published:
Updated:
ಕೂಡಲಸಂಗಮಕ್ಕೆ ವಿಶೇಷ ಬಸ್

ಬೀದರ್: ಕೂಡಲಸಂಗಮದಲ್ಲಿ ನಡೆಯಲಿರುವ ಶರಣ ಮೇಳ ಹಾಗೂ ಮುಗಳಖೋಡ ಜಾತ್ರೆಗೆ ತೆರಳುವ ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ಜ.11ರಿಂದ 15ರವರೆಗೆ ವಿಶೇಷ ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಸಂಸ್ಥೆಯ ಬೀದರ್‌ ವಿಭಾಗದಿಂದ ಜ.11ರಿಂದ 15ರವರೆಗೆ ಬೀದರ್‌ನಿಂದ ಕೂಡಲಸಂಗಮ ಹಾಗೂ ಮುಗಳಖೋಡಕ್ಕೆ ವಿಶೇಷ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಜಿಲ್ಲೆಯ ಯಾವುದೇ ಗ್ರಾಮದಿಂದ 50 ಪ್ರಯಾಣಿಕರು ಕೂಡಲಸಂಗಮ ಹಾಗೂ ಮುಗಳಖೋಡಕ್ಕೆ ಹೋಗುವವರಿದ್ದರೆ, ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಭಾಗೀಯ ಸಂಚಾರ ಅಧಿಕಾರಿ:7760992202, ವಿಭಾಗೀಯ ತಾಂತ್ರಿಕ ಶಿಲ್ಪಿ: 7760992201, ಸಹಾಯಕ ಸಂಚಾರ ವ್ಯವಸ್ಥಾಪಕ: 7760992212, ಬೀದರ್‌-1 ಘಟಕ ವ್ಯವಸ್ಥಾಪಕ: 7760992214, ಬೀದರ್-2: 7760992208 ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry