ಧ್ರುವ್‌ ಹೆಲಿಕಾಪ್ಟರ್‌ನಿಂದ ಕೆಳಗೆ ಬಿದ್ದು ಮೂವರು ಯೋಧರಿಗೆ ಗಾಯ

7

ಧ್ರುವ್‌ ಹೆಲಿಕಾಪ್ಟರ್‌ನಿಂದ ಕೆಳಗೆ ಬಿದ್ದು ಮೂವರು ಯೋಧರಿಗೆ ಗಾಯ

Published:
Updated:
ಧ್ರುವ್‌ ಹೆಲಿಕಾಪ್ಟರ್‌ನಿಂದ ಕೆಳಗೆ ಬಿದ್ದು ಮೂವರು ಯೋಧರಿಗೆ ಗಾಯ

ನವದೆಹಲಿ: ಹೆಲಿಕಾಪ್ಟರ್‌ ಮೂಲಕ ನಡೆಸುವ ಕಾರ್ಯಾಚರಣೆಯ ಅಭ್ಯಾಸದಲ್ಲಿ ತೊಡಗಿದ್ದ ಭಾರತೀಯ ಸೇನೆಯ ಯೋಧರು ಕೆಳಗೆ ಬಿದ್ದು ಗಾಯಗೊಂಡಿರುವುದಾಗಿ ವರದಿಯಾಗಿದೆ.

ದೇಶೀಯ ನಿರ್ಮಿತ ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ ಧ್ರುವ್‌ನಿಂದ ಹಗ್ಗವನ್ನು ಇಳಿಬಿಟ್ಟು, ಹೆಲಿಕಾಪ್ಟರ್‌ ಹಾರಾಟದ ನಡುವೆಯೇ ಯೋಧರು ಕೆಳಗೆ ಇಳಿಯುವ ಅಭ್ಯಾಸ ನಡೆಸಲಾಗುತ್ತಿತ್ತು. ಈ ವೇಳೆ ಹಗ್ಗ ಜಾರಿ ಮೂವರು ಯೋಧರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಮಂಗಳವಾರ(ಜ.9) ದೆಹಲಿಯ ಸೇನಾ ಪರೇಡ್‌ ಮೈದಾನದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ತನಿಖೆ ಪೂರ್ಣಗೊಳ್ಳುವವರೆಗೂ ನಡೆಸಲಾಗುತ್ತಿದ್ದ ಕಾರ್ಯಾಚರಣೆ ಅಭ್ಯಾಸವನ್ನು ಸೇನೆ ರದ್ದು ಪಡಿಸಿದೆ.

ಜ.15ರ ಸೇನಾದಿನಾಚರಣೆಯ ಅಂಗವಾಗಿ ವಿಶೇಷ ಅಭ್ಯಾಸ ನಡೆಯುತ್ತಿತ್ತು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry