ಅಫ್ಜಲ್‌ ಗುರು ಪುತ್ರ ಗಾಲಿಬ್ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ

7

ಅಫ್ಜಲ್‌ ಗುರು ಪುತ್ರ ಗಾಲಿಬ್ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ

Published:
Updated:
ಅಫ್ಜಲ್‌ ಗುರು ಪುತ್ರ ಗಾಲಿಬ್ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ

ಶ್ರೀನಗರ: ಸಂಸತ್‌ ಭವನದ ಮೇಲೆ ದಾಳಿ ನಡೆಸಿ ಗಲ್ಲುಶಿಕ್ಷೆಗೊಳಗಾಗಿದ್ದ ಉಗ್ರ ಮೊಹಮ್ಮದ್ ಅಫ್ಜಲ್‌ ಗುರುವಿನ ಪುತ್ರ ಗಾಲಿಬ್‌ ಗುರು 12ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆಯಾಗಿದ್ದಾನೆ.

ಜಮ್ಮು ಮತ್ತು ಕಾಶ್ಮೀರ ಶಾಲಾಶಿಕ್ಷಣ ಮಂಡಳಿ (ಜೆಕೆಬಿಒಎಸ್‌ಇ) ಗುರುವಾರ ಫಲಿತಾಂಶ ಪ್ರಕಟಿಸಿದ್ದು, ಗಾಲಿಬ್‌ ಶೇ 88ರಷ್ಟು ಅಂಕಗಳನ್ನು ಪಡೆದಿದ್ದಾನೆ.

‘12ನೇ ತರಗತಿ ಪರೀಕ್ಷೆಯಲ್ಲಿ ಗಾಲಿಬ್‌ 441 ಅಂಕಗಳನ್ನು ಗಳಿಸಿದ್ದಾನೆ. ಆತನ ಭವಿಷ್ಯದ ಪ್ರಯತ್ನಗಳಿಗೆ ಉತ್ತಮ ಯಶಸ್ಸು ಸಿಗಲಿ’ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರತಿಪಕ್ಷ ನ್ಯಾಷನಲ್‌ ಕಾನ್ಫರೆನ್ಸ್‌ನ ವಕ್ತಾರ ಸಾರಾ ಹಯಾತ್‌ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry