ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾನ್‌ಸ್ಟೇಬಲ್‌: ಸ್ಥಳೀಯರಿಂದ ಥಳಿತ

7

ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾನ್‌ಸ್ಟೇಬಲ್‌: ಸ್ಥಳೀಯರಿಂದ ಥಳಿತ

Published:
Updated:
ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾನ್‌ಸ್ಟೇಬಲ್‌: ಸ್ಥಳೀಯರಿಂದ ಥಳಿತ

ಗ್ರೇಟರ್ ನೋಯಿಡಾ: ಏಳು ವರ್ಷದ ಬಾಲಕಿಯ ಮೇಲೆ ಪೊಲೀಸ್‌ ಕಾನ್‌ಸ್ಟೇಬಲ್‌ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

45 ವರ್ಷ ವಯಸ್ಸಿನ ಸುಭಾಷ್‌ ಸಿಂಗ್‌ ಎಂಬ ಪೊಲೀಸ್‌ ಕಾನ್‌ಸ್ಟೇಬಲ್‌ ಸೂರಜ್‌ಪುರದಲ್ಲಿ ವಾಸವಾಗಿದ್ದು, ಬುಧವಾರ ಮನೆಯ ಸಮೀಪ ಆಟವಾಡುತ್ತಿದ್ದ ಬಾಲಕಿಯನ್ನು ಮಧ್ಯಾಹ್ನ 3ರ ಸುಮಾರಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ವರದಿಯಾಗಿದೆ. 

ಸುಭಾಷ್‌ ಕೆಲಸ ಮುಗಿಸಿಕೊಂಡು ಬುಧವಾರ ರಾತ್ರಿ ಮನೆಗೆ ಹಿಂತಿರುಗಿದ್ದ ವೇಳೆ ಸ್ಥಳೀಯ ಇಬ್ಬರು ಮಹಿಳೆಯರು ಆತನನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರ ಮೇಲೆ ಸುಭಾಷ್‌ ದಾಳಿ ನಡೆಸಿದ್ದರು. ಬಳಿಕ 100ಕ್ಕೂ ಹೆಚ್ಚು ಮಂದಿ ಸ್ಥಳೀಯರು ಒಂದಾಗಿ ಬಂದು ಸುಭಾಷ್‌ನನ್ನು ಹಿಡಿದು ಥಳಿಸಿದ್ದಾರೆ.

ಸದ್ಯ ಸುಭಾಷ್‌ ವಿರುದ್ಧ ಪೋಕ್ಸೋ ಕಾಯ್ದೆ(342, 376) ಅನ್ವಯ ಎಫ್ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry