ಪಾರ್ಥಿವ್‌ಗಾಗಿ ವೀರೂ ತೆಗೆದಿಟ್ಟ ಚಪಾತಿ ಗ್ಲೌಸ್‌!

7

ಪಾರ್ಥಿವ್‌ಗಾಗಿ ವೀರೂ ತೆಗೆದಿಟ್ಟ ಚಪಾತಿ ಗ್ಲೌಸ್‌!

Published:
Updated:
ಪಾರ್ಥಿವ್‌ಗಾಗಿ ವೀರೂ ತೆಗೆದಿಟ್ಟ ಚಪಾತಿ ಗ್ಲೌಸ್‌!

ಬೆಂಗಳೂರು: ವಿರೇಂದ್ರ ಸೆಹ್ವಾಗ್‌ ಮಾಡುವ ಸ್ವಾರಸ್ಯಕರ ಟ್ವೀಟ್‌ಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಯಾವುದೇ ವಿಷಯದ ಬಗ್ಗೆ ಪ್ರಕಟಿಸುವ ಅವರ ಟ್ವೀಟ್‌ ನಗು ಮೂಡಿಸುತ್ತದೆ. ಆದರೆ, ಬುಧವಾರ ಪಾರ್ಥಿವ್ ಪಟೇಲ್‌ ನೀಡಿದ ಪ್ರತಿಕ್ರಿಯೆಗೆ ಸೆಹ್ವಾಗ್‌ ಬೋಲ್ಡ್‌ ಆಗಿದ್ದಾರೆ.

ಪಾರ್ಥಿವ್‌ ಪಟೇಲ್‌ ಕ್ರಿಕೆಟ್‌ನಲ್ಲಿ ಬಳಸುವ ಗ್ಲೌಸ್‌ ಕುರಿತು ಸೆಹ್ವಾಗ್‌ ಚೇಡಿಸುವ ಟ್ವೀಟ್‌ ಮಾಡಿದ್ದರು. ಕೈಗಳ ಆಕಾರದಲ್ಲಿ ಚಪಾತಿಯಂತಹ ತಿಂಡಿ ಸಿದ್ಧಪಡಿಸಿ ತಟ್ಟೆಯಲ್ಲಿ ಇಟ್ಟಿರುವ ಚಿತ್ರವನ್ನು ಪ್ರಕಟಿಸಿ, ಟೆಸ್ಟ್‌ ಕ್ರಿಕೆಟ್‌ ನಡೆಯುತ್ತಿರುವ ದಕ್ಷಿಣ ಆಫ್ರಿಕಾಗೆ ‘ಗ್ಲೌಸ್‌ ಕಳುಹಿಸಬೇಕೇ ಅಥವಾ ನಿನ್ನ ಬಳಿ ಇದೆಯೋ’ ಎಂದು ಪಾರ್ಥಿವ್‌ ಅವರನ್ನು ಟ್ಯಾಗ್‌ ಮಾಡಿ ಕೇಳಿದ್ದಾರೆ.

ಟ್ವೀಟ್‌ ನೋಡಿರುವ ಪಾರ್ಥಿವ್‌, ‘ನನ್ನಲ್ಲಿ ಸರಿಯಾದ ಅಳತೆಯ ಸಾಕಷ್ಟು ಗ್ಲೌಸ್‌ಗಳು ಇವೆ. ಇದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ...ದೆಹಲಿಯಲ್ಲಿ ಚಳಿ ಹೆಚ್ಚುತ್ತಿದೆ, ಮನೆಯಲ್ಲಿ ಯಾರಿಗಾದರೂ ಉಪಯೋಗಕ್ಕೆ ಬರಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಇಬ್ಬರ ಟ್ವೀಟ್‌ಗಳು ವೈರಲ್‌ ಆಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry