ಕಾಲಲ್ಲೇ ಚಿತ್ರ, ಗಿನ್ನೆಸ್‌ ಯತ್ನ

7

ಕಾಲಲ್ಲೇ ಚಿತ್ರ, ಗಿನ್ನೆಸ್‌ ಯತ್ನ

Published:
Updated:
ಕಾಲಲ್ಲೇ ಚಿತ್ರ, ಗಿನ್ನೆಸ್‌ ಯತ್ನ

ಹೈದರಾಬಾದ್‌ನ ಮಾಗಂತಿ ಜಾಹ್ನವಿ ಕಾಲಿನಲ್ಲೇ ಚಿತ್ರ ಬಿಡಿಸುವ ಮೂಲಕ ಗಿನ್ನೆಸ್‌ ಪುಸ್ತಕದಲ್ಲಿ ಹೆಸರು ಪಡೆಯುವ ಪ್ರಯತ್ನ ಮಾಡಿದ್ದಾರೆ. 140 ಚದರ ಮೀಟರ್‌ ಸ್ಥಳದಲ್ಲಿ ಬಿಡಿಸಲಾಗಿದ್ದ ಗುಲಾಬಿ ಹೂವಿಗೆ ಬಣ್ಣ ತುಂಬಿದ್ದಾಳೆ.

ಅದಕ್ಕೆ ಆಕೆ ತೆಗೆದುಕೊಂಡಿದ್ದು 9 ಗಂಟೆ. ತನ್ನ ಸಾಧನೆಯನ್ನು ವಿಡಿಯೊ ಮಾಡಿದ್ದು ಮೊದಲಿದ್ದ 100 ಚದರ ಮೀಟರ್‌ ಪೇಂಟಿಂಗ್‌ ದಾಖಲೆಯನ್ನು ಮುರಿಯುವ ಉತ್ಸಾಹದಲ್ಲಿದ್ದಾಳೆ.

‘ಅಮೆರಿಕದಲ್ಲಿ ನಾನು ಪದವಿ ಮಾಡುತ್ತಿದ್ದೇನೆ. ಉದ್ಯಮ ಹಾಗೂ ಅರ್ಥಶಾಸ್ತ್ರ ವಿಭಾಗದ ಮೊದಲನೇ ವರ್ಷ. ಚಿಕ್ಕಂದಿನಿಂದಲೂ ನನಗೆ ಚಿತ್ರಕಲೆಯ ಬಗೆಗೆ ವಿಶೇಷ ಒಲವಿತ್ತು. ನೃತ್ಯವೂ ನನಗೆ ಅಚ್ಚುಮೆಚ್ಚು. ಒಂದು ದಿನ ಓದುತ್ತಿರುವಾಗ ನೃತ್ಯ ಹಾಗೂ ಡ್ರಾಯಿಂಗ್‌ ಅನ್ನು ಸಮ್ಮಿಳನ ಮಾಡಬೇಕು ಎಂಬ ಮನಸಾಯಿತು. ಹೀಗಾಗಿ ಈ ಪ್ರಯತ್ನ ಮಾಡಿದೆ. ನನ್ನ ತಂದೆ ತಾಯಿ ಕೂಡ ನನಗೆ ಬೆಂಬಲಿಸಿದರು’ ಎಂದು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry