ಭಾರತದಲ್ಲಿ ₹3 ಕೋಟಿ ಬೆಲೆಯ ಲ್ಯಾಂಬರ್ಗಿನಿ ಕಾರು ಬಿಡುಗಡೆ

7

ಭಾರತದಲ್ಲಿ ₹3 ಕೋಟಿ ಬೆಲೆಯ ಲ್ಯಾಂಬರ್ಗಿನಿ ಕಾರು ಬಿಡುಗಡೆ

Published:
Updated:
ಭಾರತದಲ್ಲಿ ₹3 ಕೋಟಿ ಬೆಲೆಯ ಲ್ಯಾಂಬರ್ಗಿನಿ ಕಾರು ಬಿಡುಗಡೆ

ಮುಂಬೈ: ಇಟಲಿಯ ಸ್ಫೋರ್ಟ್ಸ್‌ ಕಾರು ತಯಾರಿಕಾ ಸಂಸ್ಥೆ ಲ್ಯಾಂಬರ್ಗಿನಿ ಗುರುವಾರ ಭಾರತದಲ್ಲಿ ಎಸ್‌ಯುವಿ ಯೂರಸ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹3 ಕೋಟಿ.

ಬಿಡುಗಡೆಯಾಗಿರುವ ಹೊಸ ಮಾದರಿ ಎಸ್‌ಯುವಿ ಯೂರಸ್‌ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆ ವ್ಯಾಪ್ತಿ 2.5–3 ಪಟ್ಟು ಹೆಚ್ಚುವ ನಿರೀಕ್ಷೆ  ಇರುವುದಾಗಿ ಲ್ಯಾಂಬರ್ಗಿನಿಯ ಏಷ್ಯಾ–ಪೆಸಿಫಿಕ್‌ ಪ್ರಧಾನ ವ್ಯವಸ್ಥಾಪಕ ಆ್ಯಂಡ್ರಿಯಾ ಹೇಳಿದರು.

₹3 ಕೋಟಿ ಬೆಲೆಯ ಯೂರಸ್‌ ಲ್ಯಾಂಬರ್ಗಿನಿಯ ಎಲ್‌ಎಂ002 ನಂತರ ಬಿಡುಗಡೆಯಾಗಿರುವ ಮೊದಲ ಎಸ್‌ಯುವಿ ಆಗಿದೆ. 2012ರ ಬೀಜಿಂಗ್‌ ಆಟೊಮೊಬೈಲ್‌ ಪ್ರದರ್ಶನದಲ್ಲಿ ಯೂರಸ್‌ ಪ್ರದರ್ಶನಗೊಂಡಿತ್ತು.

ಗರಿಷ್ಠ ವೇಗ: ಗಂಟೆಗೆ 305 ಕಿ.ಮೀ.

0–100 ಕಿ.ಮೀ ವೇಗ ಪಡೆಯಲು ಸಮಯ: 3.6 ಸೆಕೆಂಡ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry