ಸಂಕ್ರಾಂತಿ ಹಬ್ಬಕ್ಕೆ ತಮನ್ನಾ ರಂಗು

7

ಸಂಕ್ರಾಂತಿ ಹಬ್ಬಕ್ಕೆ ತಮನ್ನಾ ರಂಗು

Published:
Updated:
ಸಂಕ್ರಾಂತಿ ಹಬ್ಬಕ್ಕೆ ತಮನ್ನಾ ರಂಗು

ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೆ ಕಾಲಿವುಡ್ ನಟ ವಿಕ್ರಮ್ ಮತ್ತು ‘ಮಿಲ್ಕಿ ಬ್ಯೂಟಿ’ ತಮನ್ನಾ ರಂಗು ತುಂಬಲಿದ್ದಾರೆ. ಇಬ್ಬರೂ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ‘ಸ್ಕೆಚ್‌’ ಚಿತ್ರ ಇಂದು (ಜ.12) ಬಿಡುಗಡೆಯಾಗಲಿದೆ.

ವಿಜಯ್ ಚಂದರ್ ನಿರ್ದೇಶನದ ‘ಸ್ಕೆಚ್’ ಸಾಮಾಜಿಕ ಜಾಲತಾಣಗಳಲ್ಲಿ ತುಸು ಜೋರಾಗಿಯೇ ಸದ್ದು ಮಾಡಿತ್ತು. ಬಹುದಿನಗಳ ಬಳಿಕ ವಿಕ್ರಮ್ ತಮಿಳು ಚಿತ್ರದಲ್ಲಿ ಅಭಿನಯಿಸುತ್ತಿದ್ದು ಅಭಿಮಾನಿಗಳಲ್ಲಿ ಪುಳಕ ತಂದಿದೆ.

‘ಸ್ಕೆಚ್’ ಸಿನಿಮಾದ ಹಾಡುಗಳೂ ಹಿಟ್ ಆಗಿದ್ದವು. ಭಾಷೆಯ ಗಡಿಮೀರಿ ತಮನ್ನಾರ ಸೌಂದರ್ಯ ಮತ್ತು ಪ್ರತಿಭೆ ಅಭಿಮಾನಿಗಳ ಗಮನ ಸೆಳೆದಿತ್ತು. ‘ಬಾಹುಬಲಿ’ ನಂತರ ತಮನ್ನಾರ ಬಿಗ್ ಬಜೆಟ್‌ ಚಿತ್ರ ಇದು.

ಸೂರ್ಯ– ಕೀರ್ತಿ ಸುರೇಶ್ ಜೋಡಿಯ ‘ತಾನ ಸೇಂದ್ರ ಕೂಟಂ’, ಪ್ರಭುದೇವ ಮುಂಚೂಣಿಯಲ್ಲಿರುವ ‘ಗುಲೇಬಕಾವಲಿ’ ಸಹ ಇಂದೇ ತೆರೆಕಾಣುತ್ತಿವೆ. ಕಾಲಿವುಡ್‌ನಲ್ಲಿ ಈ ವರ್ಷದ ಸಂಕ್ರಾಂತಿಯಂದು ವಿಕ್ರಮ್ ಮತ್ತು ಸೂರ್ಯ ನಡುವಣ ಪೈಪೋಟಿಯದ್ದೇ ಮಾತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry